ಬೇಡಿಕೆ ಈಡೇರದಿದ್ದರೆ ಮಾಲ್ ಗಳು, ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡುತ್ತೇವೆ : ಪ್ರತಿಭಟನಾ ನಿರತ ರೈತರ ಎಚ್ಚರಿಕೆ

Prasthutha|

ನವದೆಹಲಿ : ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವ ತಮ್ಮ ಬೇಡಿಕೆ ಜ.4ರ ಮಾತುಕತೆಯಲ್ಲಿ ಈಡೇರದಿದ್ದಲ್ಲಿ, ಹರ್ಯಾಣದಲ್ಲಿ ಮಾಲ್ ಹಾಗೂ ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಕಳೆದ 38 ದಿನಗಳಿಂದ ಕೊರೆವ ಚಳಿಯಲ್ಲೂ ದೆಹಲಿ ಗಡಿಗಳ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ.

- Advertisement -

ಇಲ್ಲಿ ವರೆಗೆ ಸರಕಾರದ ಜೊತೆ ಮಾತನಾಡಿದಾಗ ತಮ್ಮ ಬೇಡಿಕೆಯ ಶೇ.5ರಷ್ಟು ವಿಷಯಗಳ ಕುರಿತು ಮಾತ್ರ ಮಾತುಕತೆಗೆ ಸಾಧ್ಯವಾಗಿದೆ ಎಂದು ರೈತ ನಾಯಕರು ಶುಕ್ರವಾರ ಸಿಂಘು ಗಡಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಮ್ಮ ಮುಖ್ಯ ಬೇಡಿಕೆಗಳು ಈಡೇರದಿದ್ದರೆ, ಗಣರಾಜ್ಯೋತ್ಸವಕ್ಕೂ ಮೊದಲು ವಿವಿಧ ಹಂತಗಳ ಪ್ರತಿಭಟನೆಗಳನ್ನು ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

ಶಹೀನ್ ಬಾಗ್ ರೀತಿ ಈ ಪ್ರತಿಭಟನೆಯೂ ನಡೆಯುತ್ತದೆ ಎಂದು ಸರಕಾರ ಯೋಚಿಸಿದರೆ ಅದು ಅವರದ್ದೇ ತಪ್ಪು. ಶಹೀನ್ ಬಾಗ್ ನಲ್ಲಿ ಮಾಡಿದಂತೆ ನಮ್ಮನ್ನು ಈ ಪ್ರದೇಶ ಬಿಟ್ಟು ಹೋಗುವಂತೆ ಮಾಡಲು ಅವರಿಂದ ಸಾಧ್ಯವಿಲ್ಲ ಎಂದು ರೈತ ನಾಯಕ ಯದುವೀರ್ ಸಿಂಗ್ ಹೇಳಿದ್ದಾರೆ.

Join Whatsapp