ರಾಷ್ಟ್ರಧ್ವಜಕ್ಕೆ ಅಪಮಾನದ ಆರೋಪ: ಮಾಜಿ ಸಿಎಂ ಸಿದ್ದು ವಿರುದ್ಧ ದೂರು

Prasthutha|

ಚಿಕ್ಕಮಗಳೂರು: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಸ್ವಗ್ರಾಮ ಚಿಕ್ಕಮಾಗರಹಳ್ಳಿ ಯುವಕರು ದೂರು ದಾಖಲಿಸಿದ್ದಾರೆ.

- Advertisement -

ಕೇಸರಿ, ಬಿಳಿ, ಹಸಿರು ಎನ್ನೋ ಬದಲಿಗೆ ಸಿದ್ದು, ಕೆಂಪು ಅಂದಿರುವುದು ಭಾರತದ ಧ್ವಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದ ಯುವಕರು ಮತ್ತು ಜಿಲ್ಲಾ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಷ್ಟ್ರ ಧ್ವಜಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದು ಖಂಡನೀಯ ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ‌ ಆಗ್ರಹಿಸಿದ್ದಾರೆ.

Join Whatsapp