ಯುಪಿ | ಹೊಸ ಮತಾಂತರ ನಿಷೇಧ ಕಾಯ್ದೆ | ಸುಮಾರು 12 ಮುಸ್ಲಿಮ್ ಪುರುಷರ ಬಂಧನ

Prasthutha|

ಲಕ್ನೋ: ಮೊರಾದಾಬಾದ್ ಜಿಲ್ಲೆಯಲ್ಲಿ ಯುಪಿ ಪೊಲೀಸರು ಲವ್ ಜಿಹಾದ್ ಅನ್ನು ಗುರಿಯಾಗಿಸುವ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇದೀಗ ಏಳನೇ ಬಂಧನವನ್ನು ನಡೆಸಿದ್ದಾರೆ.

- Advertisement -

ಹೊಸದಾಗಿ ಅಂಗೀಕರಿಸಿದ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ 2020ರ ಅಡಿಯಲ್ಲಿ ಮಹಿಳೆಯ ತಾಯಿ ಸಲ್ಲಿಸಿದ ದೂರಿನ ಮೇರೆಗೆ ರಶೀದ್ ಮತ್ತು ಆತನ ಸಹೋದರನನ್ನುಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ನ್ಯೂಸ್ ಕ್ಲಿಕ್ ಗೆ ತಿಳಿಸಿದ್ದಾರೆ.

“ಸ್ವಇಚ್ಛೆಯಿಂದ ರಶೀದ್ ಅವರನ್ನು ವಿವಾಹವಾಗಿದ್ದೇನೆ. ನನ್ನ ವಯಸ್ಸು 22, ನಾವು ಮದುವೆಯಾಗಿ ಐದು ತಿಂಗಳಾಗಿವೆ. ನಾವು ಎರಡು ವರ್ಷಗಳಿಂದ ಸ್ನೇಹ ಸಂಬಂಧದಲ್ಲಿದ್ದೆವು” ಎಂದು ಮಹಿಳೆ ಕಾಂತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

- Advertisement -

ಯುಪಿಯಲ್ಲಿ ಹೊಸದಾಗಿ ಘೋಷಿಸಲಾದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ದಾಖಲಾದ ಆರಂಭಿಕ ಪ್ರಕರಣಗಳು ಪರಿಶೀಲನೆಗೆ ಒಳಪಟ್ಟಿವೆ. ಏಕೆಂದರೆ ಬಂಧನಕ್ಕೊಳಗಾದವರ ಕುಟುಂಬಸ್ಥರು ಪೊಲೀಸ್ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸರ್ಕಾರವು ಮುಸ್ಲಿಮರ ವಿರುದ್ಧ ಕಾನೂನನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹೊಸ ಸುಗ್ರೀವಾಜ್ಞೆಯ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಸೆಕ್ಷನ್ 3ರ ಅಡಿಯಲ್ಲಿ ಬಂಧಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧದ ಆರೋಪ ಎತ್ತಿಹಿಡಿಯಲಾದರೆ, 1-5 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.15,000 ವರೆಗೆ ದಂಡ ವಿಧಿಸಲಾಗುವುದು.

ಹೊಸ ಕಾನೂನಿನಡಿಯಲ್ಲಿ ದಾಖಲಾಗುವ ಐದನೇ ಪ್ರಕರಣ ಇದಾಗಿದೆ. ಉತ್ತರಪ್ರದೇಶ ಪೊಲೀಸರು ನವೆಂಬರ್ 28 ರಂದು ಬರೇಲಿಯಲ್ಲಿ ಮೊದಲ ಬಂಧನ ನಡೆಸಿದರು. ಮತ್ತೊಂದು ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದ್ದು, ಎಂಟು ಮಂದಿಯನ್ನು ಸೀತಾಪುರದಲ್ಲಿ, 14 ಮಂದಿಯನ್ನು ಮೌನಲ್ಲಿ ಮತ್ತು ಇಬ್ಬರನ್ನು ಮುಝಫ್ಫರ್ ನಗರದಲ್ಲಿ ಬಂಧಿಸಲಾಗಿದೆ.


Join Whatsapp