ಮಾಧ್ಯಮಗಳ ವಿರುದ್ಧ ಹೈಕೋರ್ಟ್ ಗೆ ದೂರು ಸಲ್ಲಿಸಿದ ಬಾಲಿವುಡ್

Prasthutha|


ಕೆಲವು ಮಾಧ್ಯಮಗಳ ಬೇಜವಾಬ್ದಾರಿಯುತ ವರದಿಗಾಗಿ ಬಾಲಿವುಡ್ ನ ಕೆಲವು ಚಿತ್ರ ತಯಾರಕರು ಮತ್ತು ನಿರ್ಮಾಪಕರು ದಿಲ್ಲಿ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಲ್ಲಿಸಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಸುಶಾಂತ್ ಸಿಂಗ್ ರಜಪೂತ್‌ ವಿಚಾರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ನಾಲ್ಕು ಬಾಲಿವುಡ್ ಇಂಡಸ್ಟ್ರೀ ಅಸೋಸಿಯೇಶನ್ ಗಳು ಮತ್ತು ಮೂವತ್ತು ಖ್ಯಾತ ನಿರ್ಮಾಪಕರು ಸಲ್ಲಿಸಿದ ಮೊಕದ್ದಮೆಯು ಇಂಡಸ್ಟ್ರಿಗೆ ಸಂಬಂಧಿಸಿದ ವ್ಯಕ್ತಿಗಳ ಖಾಸಗಿತನದ ಹಕ್ಕಿನ ಮೇಲೆ ಈ ಮಾಧ್ಯಮಗಳ ಹಸ್ತಕ್ಷೇಪವನ್ನು ತಡೆಯಬೇಕು ಎಂದಿದೆ.
ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ಹಾಗೂ ಪ್ರದೀಪ್ ಭಂಡಾರಿ ವಿರುದ್ಧ; ಟೈಂಸ್ ನೌ ಹಾಗೂ ಅದರ ಪ್ರಮುಖ ಆಂಕರ್ ಗಳಾದ ರಾಹುಲ್ ಶಿವಶಂಕರ್ ಮತ್ತು ನಾವಿಕಾ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.

Join Whatsapp