ಮೋದಿ ಉದ್ಘಾಟಿಸಿದ ಅಟಲ್ ಸುರಂಗದಿಂದ ಸೋನಿಯಾ ಶಿಲಾನ್ಯಾಸ ಫಲಕ ಕಾಣೆ: ಕಾಂಗ್ರೆಸ್ ಪ್ರತಿಭಟನೆಯ ಎಚ್ಚರಿಕೆ

Prasthutha|

ಚಂಡಿಘಡ: ರಾಜ್ಯದಲ್ಲಿ ಅಟಲ್ ಸುರಂಗದಿಂದ ಸೋನಿಯಾ ಗಾಂಧಿಯವರ ಶಿಲಾನ್ಯಾಸ ಫಲಕವನ್ನು ತೆಗೆದುಹಾಕಿರುವುದನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ಖಂಡಿಸಿದ್ದು ಪ್ರತಿಭಟನೆಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ.

ಮನಾಲಿಯನ್ನು  ಲಹೌಲ್ ಸ್ಪಿಟಿಗೆ ಸಂಪರ್ಕಿಸುವ ಮತ್ತು 5 ಗಂಟೆಗಳ ಪ್ರಯಾಣವನ್ನು ಕಡಿಮೆಗೊಳಿಸುವ ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅ.3ರಂದು ಉದ್ಘಾಟಿಸಿದ್ದರು.

- Advertisement -

ಸುರಂಗದ ಉದ್ಘಾಟನೆಯ ವೇಳೆ ಸೋನಿಯಾ ಗಾಂಧಿಯವರ ಹೆಸರಿನ ಶಿಲಾನ್ಯಾಸ ಫಲಕವು ಕಾಣೆಯಾಗಿದೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಕುಲದೀಪ್ ಸಿಂಗ್ ರಾಥೂರ್ ಈ ಕುರಿತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗೆ ಪತ್ರ ಬರೆದಿದ್ದು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. 2010ರ ಜೂನ್ 28ರಂದು ಸೋನಿಯಾಗಾಂಧಿ ಸುರಂಗ ಯೋಜನೆಗೆ ಶಿಲಾನ್ಯಾಸ ಹಾಕಿದ್ದರು ಎಂದು ಕಾಂಗ್ರೆಸ್ ಹೇಳಿದೆ.

- Advertisement -