ಭಾರತದ ಅತೀ ದೊಡ್ಡ ದಾನಿಯಾಗಿ ಹೊರ ಹೊಮ್ಮಿದ ಅಝೀಂ ಪ್ರೇಂ ಜಿ

Prasthutha|

- Advertisement -

ಹೊಸದಿಲ್ಲಿ : 7,904 ಕೋಟಿ ರೂ ದಾನ ಮಾಡಿದ ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಝೀಂ ಪ್ರೇಮ್ ಜಿ ಭಾರತದ ದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಅವರು ದಾನ ಮಾಡಲು ದಿನನಿತ್ಯ 22 ಕೋಟಿ ಮೀಸಲಿಟ್ಟಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅಝೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ವಿಪ್ರೋ 1,125 ಕೋಟಿ ರೂ ಖರ್ಚು ಮಾಡಿದೆ.

ಎಡೆಲ್ಗೀವ್ ಹ್ಯುರಾನ್ ಇಂಡಿಯಾ ಚಾರಿಟಿ ಲಿಸ್ಟ್ 2020 ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಚ್.ಸಿ.ಎಲ್ ಟೆಕ್ನಾಲಜೀಸ್ ನ ಶಿವ ನಾಡರ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 795 ಕೋಟಿ ದಾನ ಮಾಡಿದ್ದಾರೆ. ರಿಲಯನ್ಸ್ ಇಂಟಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ 458 ಕೋಟಿ ದಾನ ಮಾಡಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ ಮತ್ತು ಅವರ ಕುಟುಂಬವು 276 ಕೋಟಿ ರೂ ದಾನ ಮಾಡಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Join Whatsapp