ಬಿಜೆಪಿ ಮುಖಂಡ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಪ್ರಕರಣ : ಉಲ್ಟಾ ಹೊಡೆದ ದೂರುದಾರೆ

Prasthutha|


ಲಕ್ನೋ : ಉತ್ತರಪ್ರದೇಶದ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ, ಸಂಸದ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ದೂರು ನೀಡಿದ್ದ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾಳೆ.
ಅಲಹಾಬಾದ್ ಹೈ ಕೋರ್ಟ್ ನ ನಿರ್ದೇಶನದ ಮೇರೆಗೆ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ 23 ವರ್ಷದ ಕಾನೂನು ವಿದ್ಯಾರ್ಥಿನಿ 72ವರ್ಷದ ಸ್ವಾಮಿ ಚಿನ್ಮಯಾನಂದ್ ವಿರುದ್ಧ ನೀಡಿದ್ದ ತನ್ನ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾಳೆ. ಕೆಲವರ ಒತ್ತಡದಿಂದಾಗಿ ಚಿನ್ಮಯಾನಂದರ ವಿರುದ್ಧ ತಾನು ಅತ್ಯಾಚಾರ ದೂರನ್ನು ನೀಡಿದ್ದೆ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿದ್ದಾಳೆ.

ಚಿನ್ಮಯಾನಂದ ಒಡೆತನದ ಶಹಜಹಾನ್ ಪುರದ ಕಾನೂನು ಕಾಲೇಜಿನ ವಿದ್ಯಾರ್ಥಿನಿ 2019 ಸೆಪ್ಟೆಂಬರ್ 5ರಂದು ಅವರ ವಿರುದ್ಧ ದೂರು ಸಲ್ಲಿಸಿದ್ದಳು. ಐದು ದಿನಗಳ ನಂತರ ವಿದ್ಯಾರ್ಥಿನಿಯ ತಂದೆ ಅವಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಇದರೊಂದಿಗೆ ಈ ಘಟನೆ ಪ್ರಮುಖ ಸುದ್ದಿಯಾಗಿತ್ತು.
ಸ್ನೇಹಿತರೊಂದಿಗೆ ತಲೆಮರೆಸಿಕೊಂಡ ವಿದ್ಯಾರ್ಥಿನಿ, ಚಿನ್ಮಯಾನಂದ್ ನನ್ನನ್ನು ಒಂದು ವರ್ಷದಿಂದ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ. ಇದಕ್ಕೆ ಪುರಾವೆಗಳಿವೆ. ಇದನ್ನು ಬಹಿರಂಗಪಡಿಸುವುದು ಜೀವಕ್ಕೆ ಅಪಾಯಕಾರಿ ಎಂದು ಹೇಳಿದ್ದಳು. ಇದರೊಂದಿಗೆ 2019ರ ಸೆಪ್ಟೆಂಬರ್ 20ರಂದು ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ್ ನನ್ನು ಬಂಧಿಸಲಾಯಿತು. ಇದಲ್ಲದೆ ಚಿನ್ಮಯಾನಂದ್ ವಿದ್ಯಾರ್ಥಿನಿಗೆ ಕಿರುಕುಳ ನೀಡುವ ದೃಶ್ಯಗಳು ಬಿಡುಗಡೆಯಾಗಿತ್ತು.

- Advertisement -