ಫ್ರಾನ್ಸ್ ನಗರದಲ್ಲಿ ಚರ್ಚ್ ಬಳಿ ದಾಳಿ | ಮೂವರ ಸಾವು

Prasthutha|

ಪ್ಯಾರಿಸ್ : ಫ್ರಾನ್ಸ್ ನ ನೈಸ್ ನಗರದ ಚರ್ಚ್ ಒಂದರ ಮೇಲೆ ಓರ್ವ ದುಷ್ಕರ್ಮಿ ಇಂದು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಹರಿತವಾದ ಆಯುಧದಿಂದ ಆಘಂತುಕನು ದಾಳಿ ನಡೆಸಿದ್ದು, ಓರ್ವ ಮಹಿಳೆಯ ಶಿರಚ್ಛೇಧ ಮಾಡಿದ್ದಾನೆ.

- Advertisement -

ಮೃತರಲ್ಲಿ ಒಬ್ಬರು ಚರ್ಚ್ ಮೇಲ್ವಿಚಾರಕಿ ಎನ್ನಲಾಗಿದೆ. ದಾಳಿಕೋರನ ಮೇಲೆ ಗುಂಡಿಕ್ಕಿ, ಆತನನ್ನು ವಶಕ್ಕೆ ಪಡೆಯಲಾಗಿದೆ. ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಫ್ರಾನ್ಸ್ ಆಡಳಿತ ಮೂಲಗಳು ತಿಳಿಸಿವೆ.

ಫ್ರೆಂಚ್ ಭಯೋತ್ಪಾದನೆ ವಿರೋಧಿ ಅಭಿಯೋಕರು ತನಿಖೆ ಕೈಗೆತ್ತಿಕೊಂಡಿದ್ದಾರೆ.   

Join Whatsapp