ನ್ಯೂಯಾರ್ಕ್ | ‘ಸ್ವಘೋಷಿತ ಸ್ವಸಹಾಯ ಗುರು’ ಕೇತ್ ರೆನಿರ್ ಗೆ 120 ವರ್ಷ ಜೈಲು

Prasthutha|

ನ್ಯೂಯಾರ್ಕ್ : ಮಹಿಳೆಯರನ್ನು ಲೈಂಗಿಕ ಗುಲಾಮರಂತೆ ನೋಡಿಕೊಳ್ಳುವ ಆರೋಪವಿರುವ ಪ್ರತ್ಯೇಕ ಪಂಥ NXIVM ಗ್ರೂಪ್ ನ ಸಂಸ್ಥಾಪಕ, ‘ಸ್ವಸಹಾಯ ಗುರು’ ಕೇತ್ ರೆನಿರ್ ಗೆ ನ್ಯೂಯಾರ್ಕ್ ನ್ಯಾಯಾಲಯವೊಂದು 120 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಕೇತ್ ಮಹಿಳೆಯರನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಬಲವಂತ ಪಡಿಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.

- Advertisement -

5 ದಿನಗಳ ‘ಸ್ವಸಹಾಯ’ ಕೋರ್ಸ್ ಗೆ 5,000 ಡಾಲರ್ ಪಾವತಿಸುವಂತೆ ತನ್ನ ಹಿಂಬಾಲಕರಿಗೆ ಸೂಚಿಸಲಾಗುತ್ತದೆ. ಬಳಿಕ ಅವರನ್ನು ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯಕ್ಕೊಳಪಡಿಸಲಾಗುತ್ತದೆ. ಆಹಾರ ಸೇವನೆಗೆ ಕಡ್ಡಾಯವಾಗಿ ಮಿತಿ ಹೇರಲಾಗುತ್ತದೆ ಎಂಬುದು ತಿಳಿದು ಬಂದಿದೆ.

ರೆನೀರ್ ಡಿಒಎಸ್ ಎಂಬ ಪಂಥವೊಂದನ್ನು ಸ್ಥಾಪಿಸಿದ್ದಾನೆ. ಅದು ಪಿರಮಿಡ್ ಆಕಾರದಲ್ಲಿದ್ದು, ಅದರಲ್ಲಿ ಮಹಿಳೆಯರನ್ನು ‘ಗುಲಾಮ’ರು ಮತ್ತು ಆತ ‘ಗ್ರಾಂಡ್ ಮಾಸ್ಟರ್’ ಆಗಿ ಮೇಲ್ಮೈಯಲ್ಲಿರುತ್ತಾನೆ. ‘ಗುಲಾಮ’ರನ್ನು ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಮಾಡಲಾಗುತಿತ್ತು. ಕೆಲವು ಮಹಿಳೆಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. 90 ಸಂತ್ರಸ್ತೆಯರು ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು ಮತ್ತು 13 ಮಂದಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

- Advertisement -