ನಿಮ್ಮ ಮಗಳಾಗಿರುತ್ತಿದ್ದರೆ ಈ ರೀತಿ ಮಾಡುತ್ತಿದ್ದೀರಾ?: ಹಥ್ರಾಸ್ ಪ್ರಕರಣದಲ್ಲಿ ಪೊಲೀಸರನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

Prasthutha|


ಲಖ್ನೋ : ಹಥ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಶವವನ್ನು ಕುಟುಂಬದವರ ವಿರೋಧದ ನಡುವೆಯೂ ಅಂತ್ಯ ಸಂಸ್ಕಾರ ನಡೆಸಿದ್ದನ್ನು ಪ್ರಶ್ನಿಸಿದ ನ್ಯಾಯಾಲಯ ಅಧಿಕಾರಿಗಳನ್ನು ಕಟುವಾಗಿ ಟೀಕಿಸಿದೆ.
ಬಾಲಕಿ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೆ ಜಿಲ್ಲಾಡಳಿತ ಮತ್ತು ಪೊಲೀಸರು ಈ ರೀತಿ ಮಾಡುತ್ತಿದ್ದರೇ? ಎಂದು ಪ್ರಶ್ನಿಸಿದ ನ್ಯಾಯಾಲಯ ಜಿಲ್ಲಾಧಿಕಾರಿ ಮತ್ತು ಎಡಿಜಿಪಿಯನ್ನು ಕಟುವಾಗಿ ಟೀಕಿಸಿದೆ.
ಪ್ರದೇಶದ ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದ ಬಾಲಕಿಯ ಶವವನ್ನು ಅದೇದಿನ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸರು ಹೇಳಿರುವುದು ನ್ಯಾಯಾಲವನ್ನು ಕೆರಳಿಸಿದೆ.
“ಅದು ನಿಮ್ಮದೇ ಮಗಳ ಮೃತದೇಹವಾಗಿದ್ದರೆ ನೀವು ಈ ರೀತಿ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತೀರಾ?” ಎಂದು ನ್ಯಾಯಾಲಯವು ಎಡಿಜಿಪಿ ಪ್ರಶಾಂತ್ ಕುಮಾರ್ ಅವರನ್ನು ಪ್ರಶ್ನಿಸಿದೆ. “ಬಾಲಕಿ ಶ್ರೀಮಂತ ಕುಟುಂಬದವಳಾಗಿದ್ದರೆ ನೀವು ಶವ ಸಂಸ್ಕಾರ ಇದೇ ರೀತಿ ಮಾಡುತ್ತಿದ್ದಿರಾ?” ಎಂದು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ರನ್ನು ಪ್ರಶ್ನಿಸಿದೆ.

Join Whatsapp