ಕೋವಿಡ್ ಬಾಧಿತರನ್ನು ಪತ್ತೆ ಹಚ್ಚಲು ಕ್ಯಾಮರಾಗಳನ್ನು ಅಳವಡಿಸಿದ ಮಸ್ಜಿದುಲ್ ಹರಂ
Prasthutha: November 3, 2020

ದಮ್ಮಾಮ್ : ಕೋವಿಡ್ ಬಾಧಿತರನ್ನು ಪತ್ತೆ ಹಚ್ಚಲು ಮಸ್ಜಿದುಲ್ ಹರಂನ ವಿವಿಧ ದ್ವಾರಗಳಲ್ಲಿ ವಿಶೇಷ ಕಣ್ಗಾವಲು ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಉಮ್ರಾ ಸೇವೆಯನ್ನು ಪುನರಾರಂಭಿಸಿದ ನಂತರ ಸೌದಿ ಅರೇಬಿಯಾ ಮತ್ತು ಹೊರಗಿನಿಂದ ಬರುವ ಹೆಚ್ಚಿನ ಯಾತ್ರಾರ್ಥಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದ ನಂತರ ಕೋವಿಡ್ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಮಸ್ಜಿದುಲ್ ಹರಂ ಪ್ರವೇಶಿಸುವವರ ತಾಪಮಾನವನ್ನು 6 ಮೀಟರ್ ದೂರದಲ್ಲಿ ಅಳೆಯಲಾಗುತ್ತದೆ. ಹೆಚ್ಚಿನ ತಾಪಮಾನಗಳನ್ನು ಸೂಚಿಸುವವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
