ಐಪಿಎಲ್ 2020 | ಈ ಸೀಸನ್ ನ ಆರೆಂಜ್ ಕ್ಯಾಪ್ ಯಾರಿಗೆ? ಪರ್ಪಲ್ ಕ್ಯಾಪ್ ಯಾರಿಗೆ?

Prasthutha|

ಮುಂಬೈ : ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ 14 ಇನ್ನಿಂಗ್ಸ್ ನಲ್ಲಿ 670 ರನ್ ಗಳನ್ನು ಗಳಿಸುವ ಮೂಲಕ ಕರ್ನಾಟಕದ ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ, ದೆಹಲಿ ಕ್ಯಾಪಿಟಲ್ಸ್ ನ ಕಗಿಸೊ ರಬಾಡ 14 ಇನ್ನಿಂಗ್ಸ್ ನಲ್ಲಿ 25 ವಿಕೆಟ್ ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಬ್ಯಾಟಿಂಗ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ನ ಶಿಖರ್ ಧವನ್ 525 ರನ್ ಗಳೊಂದಿಗೆ ಕೆ.ಎಲ್. ರಾಹುಲ್ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೇವದತ್ ಪಡಿಕ್ಕಲ್ 472 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದ್ದಾರೆ. ಅವರು 460 ರನ್ ಗಳಿಸಿದ್ದಾರೆ.

- Advertisement -

ಬೌಲಿಂಗ್ಸ್ ನಲ್ಲಿ ಕಗಿಸೊ ರಬಾಡ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನ ಜಸ್ಪ್ರೀತ್ ಬುಮ್ರಾ ಇದ್ದು, ಅವರು 13 ಇನ್ನಿಂಗ್ಸ್ ನಲ್ಲಿ 23 ವಿಕೆಟ್ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ನಾಲ್ವರು ಬೌಲರ್ ಗಳು ತಲಾ 20 ವಿಕೆಟ್ ಗಳೊಂದಿಗೆ ಸಾಧನೆ ಮೆರೆದಿದ್ದಾರೆ. ಎಂಐನ ಟ್ರೆಂಟ್ ಬೌಲ್ಟ್, ಕಿಂಗ್ಸ್ ಎಲೆವೆನ್ ಪಂಜಾಬ್ ನ ಮೊಹಮ್ಮದ್ ಶಮಿ, ರಾಜಸ್ಥಾನ ರಾಯಲ್ಸ್ ನ ಜೊಫ್ರಾ ಆರ್ಚೆರ್ ಮತ್ತು ಆರ್ ಸಿಬಿಯ ಯಜುವೇಂದ್ರ ಚಹಲ್ ಮೂರನೇ ಸ್ಥಾನದಲ್ಲಿರುವ ಬೌಲರ್ ಗಳು.

- Advertisement -