ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಶಸ್ತಿ ವಿತರಣೆ ಕಾರ್ಯಕ್ರಮ

Prasthutha|

ಮಂಗಳೂರು: ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಸೌದಿ ಅರೇಬಿಯಾ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸುವ ಕಾರ್ಯಕ್ರಮ ಡಿ.2ರಂದು ಮಂಗಳೂರಿನ ವೆಸ್ಟ್ ಕೋಸ್ಟ್ ಬಿಲ್ಡಿಂಗ್ ನ ಕೋಸ್ಟಲ್ ಸಭಾಂಗಣದಲ್ಲಿ ನಡೆಯಿತು. 

- Advertisement -

ಕಾರ್ಯಕ್ರಮ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಾದ ಅನ್ಸಾರ್ ಕಾಟಿಪಳ್ಳ ಒಮಾನ್, ಮುಹಮ್ಮದ್ ಸೈಪುದ್ದೀನ್ ದ.ಕ ಮತ್ತು ಶಾಕಿರ್ ಹಕ್ ನೆಲ್ಯಾಡಿ K.S.A  ಅವರಿಗೆ ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ಹಾಗೆಯೇ ನಿಂಗಮ್ಮ ಲೇಖನಿ ಬಿ.ಕೊಪ್ಪಳ ತಾಲೂಕು, ಸಲ್ಮಾ ಮಂಗಳೂರು, ಉಮ್ಮರ್ ಫಾರೂಕ್ ಕುಕ್ಕಾಜೆ U.A.E, ತಾಜುದ್ದೀನ್ ಪೇರಲ್ತಡ್ಕ, ನಿಜಾಮುದ್ದೀನ್ ಉಪ್ಪಿನಂಗಡಿ ತಬೂಕ್, ಪರ್ವೇಜ್ ಆಬಿದ್ದಿನ್ ಯಾಂಬು K.S.A, ಅಬೂ ಅಹದ್, ರುಖಿಯಾ ಹಕೀಮ್ ಮಂಗಳೂರು, ಅಬೂ ಸನ ಮಂಗಳೂರು, ರಮ್ಲತ್ ಎನ್.ಬಿ ಬಂಟ್ವಾಳ ಇವರುಗಳು ಬರೆದ ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದವು.

- Advertisement -

ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಅಧ್ಯಕ್ಷ ಮುಹಮ್ಮದ್ ಶಾಕಿರ್, ಪ್ರಸ್ತುತ ಓದುಗರ ವೇದಿಕೆ ದಮ್ಮಾಮ್ ಇದರ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಪ್ರಸ್ತುತ ವ್ಯವಸ್ಥಾಪಕ ನವಾಝ್, ಸಂಪಾದಕೀಯ ಮಂಡಳಿ ಸದಸ್ಯೆ ಶಾಹಿದಾ ಅಸ್ಲಂ, ಸಂಪಾದಕ ಝಿಯಾವುಲ್ ಹಕ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಸದಸ್ಯರಾದಂತಹ ಇರ್ಶಾದ್ ಬಜ್ಪೆಯವರು ಪ್ರಸ್ತುತವು ನಡೆದು ಬಂದ ಹಾದಿಯ ಬಗ್ಗೆ ಸವಿವರವಾಗಿ ವಿವರಿಸಿ ಧನ್ಯವಾದ ಸಮರ್ಪಿಸಿದರು.

Join Whatsapp