ಜುಬೈಲ್ ಪ್ರಸ್ತುತ ಓದುಗರ ವೇದಿಕೆ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ ಬಿಡುಗಡೆ

Prasthutha|

ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಸೌದಿ ಅರೇಬಿಯಾ ಇದರ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜುಬೈಲ್ ನ ರೋಯಲ್ ಡೈನ್ ರೆಸ್ಟೋರೆಂಟ್ ನಲ್ಲಿ ನಡೆಯಿತು

- Advertisement -

ಈ ಸಂದರ್ಭದ ಮೊದಲಿಗೆ ಪ್ರಸಕ್ತ ನಮ್ಮ ದೇಶದ ಮಾಧ್ಯಮಗಳು ಎಂಬ ವಿಚಾರದಲ್ಲಿ ನಡೆದ ಚರ್ಚಾಕೂಟದಲ್ಲಿ, ಇಂಡಿಯನ್ ಸೋಶಿಯಲ್ ಫಾರಂ ಇದರ ಕೇಂದ್ರ ಸಮಿತಿ ಸದಸ್ಯರಾದ ಅಶ್ರಫ್ ಮಂಗಳೂರು, ಇಂಡಿಯನ್ ಸೋಶಿಯಲ್ ಫಾರಂ ದಮ್ಮಾಮ್ ರಾಜ್ಯಾಧ್ಯಕ್ಷರಾದ ಶರೀಫ್ ಜೋಕಟ್ಟೆ ಮತ್ತು ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ಜುಬೈಲ್ ಇದರ ಐಟಿ ಮೆನೇಜರ್ ನದೀಮ್ ಮತ್ತಿತರರು ಉಪಸ್ಥಿತರಿಸದ್ದರು. ಈ ಚರ್ಚಾಕೂಟವನ್ನು ಪ್ರಸ್ತುತ ಓದುಗರ ವೇದಿಕೆ ಸಮಿತಿ ಸದಸ್ಯ ಅಶೀಕ್ ಮಚಾರ್ ನಡೆಸಿಕೊಟ್ಟರು.

ನಂತರದ ಕಾರ್ಯಕ್ರಮದಲ್ಲಿ ಇಸ್ಹಾಕ್ ಮಂಗಳೂರು ಪ್ರಸ್ತುತ ಕ್ಯಾಲೆಂಡರ್ 2021 ಬಿಡುಗಡೆಗೊಳಿಸಿ, ಪ್ರಸಕ್ತ ಸನ್ನಿವೇಶದಲ್ಲಿ ಮಾಧ್ಯಮಗಳ ಜವಾಬ್ದಾರಿ ಎಂಬ ವಿಚಾರದಲ್ಲಿ ಮಾತನಾಡಿದರು. ಪ್ರಸ್ತುತ ನಡೆದು ಬಂದ ದಾರಿ ಮತ್ತು ಸತ್ಯ ಸುದ್ದಿಗಳನ್ನು ಜನರಿಗೆ ತಲುಪಿಸಲು ಪ್ರಸ್ತುತದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಪ್ರಸ್ತುತ ಓದುಗರ ವೇದಿಕೆಯ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಅಧ್ಯಕ್ಷರಾದ ಸಲೀಂ ವೇಣೂರ್ ತಿಳಿಸಿಕೊಟ್ಟರು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ‌  ನದೀಮ್ ಮೈಸೂರು, ಇಂಡಿಯಾ ಫ್ರಟೆರ್ನಿಟಿ ಫಾರಂ ದಮ್ಮಾಮ್ ಜಿಲ್ಲಾಧ್ಯಕ್ಷರಾದ ಸಾಜಿದ್ ವಳವೂರ್ ಮತ್ತು ಇಂಡಿಯಾ ಫ್ರಟೆರ್ನಿಟಿ ಫಾರಂ ಜುಬೈಲ್ ಜಿಲ್ಲಾಧ್ಯಕ್ಷರಾದ ಅಬುಸ್ವಾಲಿಹ್ ಉಪಸ್ಥಿತರಿದ್ದರು.

ಪ್ರಸ್ತುತ ಕ್ಯಾಲೆಂಡರ್ 2021 ಇದರ ಜಾಹಿರಾತುದಾರರಾಗಿ ಗಲ್ಫ್ ಏಷಿಯನ್ ಮೆಡಿಕಲ್ ಸೆಂಟರ್, ರಕ್ವಾನಿ ಕಂಪನಿ, ಎಲೈಟ್ ಟ್ರೇಡಿಂಗ್ ಎಂಡ್ ಕಾಂಟ್ರಾಕ್ಟಿಂಗ್ ಕಂಪನಿ, ಅಲ್ ಖೋಬಾರ್ ಟ್ರೇಡಿಂಗ್ ಪ್ರೊಜೆಕ್ಟ್ , ಫತೇಹ್ ಅಲ್ ಜುಬೈಲ್ ಮತ್ತು ಮಚಲಿ ಕಿಂಗ್ಡಮ್ ಎಂಬ ಸಂಸ್ಥೆಗಳು ಕೈ ಜೋಡಿಸಿದ್ದವು.

ಕಾರ್ಯಕ್ರಮವನ್ನು ಸ್ವಾಗತಿಸಿದ ಅನ್ಸರ್ ಕಾರ್ಕಳ ನಿರೂಪಣೆಗೈದರು ಹಾಗೂ ಮತೀನ್ ನಗೂರ್ ರವರು ಧನ್ಯವಾದ ಸಮರ್ಪಿಸಿದರು.

Join Whatsapp