ಲಖನೌ: ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸಲು ಉತ್ತರ ಪ್ರದೇಶದ ಪೊಲೀಸರು ವಿಶೇಷ ತಂಡ ಅಥವಾ ಎಸ್.ಐ.ಟಿ ಅನ್ನು ರಚಿಸಿದ್ದಾರೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮುಹಮ್ಮದ್ ಝುಬೇರ್ ಅವರಿಗೆ ಸುಪ್ರೀಮ್ ಕೋರ್ಟ್ ಮಧ್ಯಂತರ ಜಾಮೀನನ್ನು ವಿಸ್ತರಿಸಿದ ದಿನದಂದೇ ಈ ಬೆಳವಣಿಗೆ ನಡೆದಿದೆ.
ಈ ಮಧ್ಯೆ ಸುಪ್ರೀಮ್ ಕೋರ್ಟ್ ಆದೇಶ ಕೇವಲ ಸೀತಾಪುರ ಪ್ರಕರಣಕ್ಕೆ ಸೀಮಿತವಾಗಿದೆ ಮತ್ತು ದೆಹಲಿ, ಲಖಂಪುರದಲ್ಲಿ ಮುಹಮ್ಮದ್ ಝುಬೇರ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸುಪ್ರೀಮ್ ಕೋರ್ಟ್’ನ ಆದೇಶ ಅನ್ವಯವಾಗುವುದಿಲ್ಲ. ಇದರಿಂದಾಗಿ ಮುಹಮ್ಮದ್ ಜೈಲಿನಲ್ಲಿಯೇ ಕಳೆಯಬೇಕಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಪತ್ರಕರ್ತ ಮುಹಮ್ಮದ್ ಝುಬೇರ್ ವಿರುದ್ಧ ಉತ್ತರ ಪ್ರದೇಶದ ಸೀತಾಪುರ, ಲಖಿಂಪುರ, ಹತ್ರಾಸ್ ಮತ್ತು ಮುಝಾಫರ್ ನಗರದಲ್ಲಿ ಪ್ರಕರಣಗಳು ದಾಖಲಾಗಿವೆ.