ವಿರೋಧದ ಬಳಿಕ ‘ಪ್ಯೂರ್ ವೆಜ್ ಡೆಲಿವರಿ’ ಹಿಂಪಡೆಯಲು ಝೊಮ್ಯಾಟೋ ನಿರ್ಧಾರ

Prasthutha|

ನವದೆಹಲಿ: ಝೊಮ್ಯಾಟೋ ಆಫರ್ ಮಾಡಿರುವ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಈ ಸೇವೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಮಂಗಳವಾರ ರಾತ್ರಿ ಹೇಳಿದ್ದಾರೆ.

- Advertisement -


ದೀಪಿಂದರ್ ಗೋಯಲ್ ನಿನ್ನೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು. ಝೊಮ್ಯಾಟೋ ದ ಈ ಸೇವೆಯು ಜಾತೀಯತೆಯನ್ನು ಸೃಷ್ಟಿಸುತ್ತದೆ ಎಂಬುದು ಹೆಚ್ಚಿನ ಆಕ್ಷೇಪ. ಹೀಗಾಗಿ, ಜೊಮಾಟೊ ಈ ಎರಡು ಸೇವೆಗಳನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದೆ.


ಸಸ್ಯಾಹಾರಿಗಳಿಗಾಗಿ ಜೊಮಾಟೊ ಈ ಎರಡು ಸೇವೆ ಆರಂಭಿಸಿತ್ತು. ಪ್ಯೂರ್ ವೆಜ್ ಮೋಡ್ ನಲ್ಲಿ ಬುಕ್ ಮಾಡಲಾಗುವ ಆಹಾರವನ್ನು ವೆಜ್ ಹೋಟೆಲ್ ಗಳಿಂದ ಮಾತ್ರವೇ ಪಿಕಪ್ ಮಾಡಿ, ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತದೆ.



Join Whatsapp