ನವದೆಹಲಿ: ಆಹಾರ ವಿತರಣಾ ವೇದಿಕೆ ಆಗಿರುವ ಝೊಮ್ಯಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಗುಂಜನ್ ಪಾಟಿದಾರ್ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಝೊಮ್ಯಾಟೊ ಸ್ಥಾಪನೆಯಾದ ಮೊದಲ ಕೆಲ ಉದ್ಯೋಗಿಗಳಲ್ಲಿ ಪಾಟಿದಾರ್ ಸಹ ಒಬ್ಬರು. ಅಲ್ಲದೇ ಪಾಟಿದಾರ್ ಕಂಪನಿಗಾಗಿ ಕೋರ್ ಟೆಕ್ ಸಿಸ್ಟಮ್’ಗಳನ್ನ ನಿರ್ಮಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತಾಂತ್ರಿಕ ಕಾರ್ಯವನ್ನು ಮುನ್ನಡೆಸಿದ್ದಾರೆ. ಆದರೆ ಅವರು ರಾಜೀನಾಮೆಗೆ ಕಾರಣವನ್ನು ಬಹಿರಂಗಪಡಿಸಿಲ್ಲ.
ಕಳೆದ ವರ್ಷ ನವೆಂಬರ್’ನಲ್ಲಿ ಕಂಪನಿಯ ಮತ್ತೊಬ್ಬ ಸಹ-ಸಂಸ್ಥಾಪಕರಾಗಿದ್ದ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದರು.