ಮತ್ತೆ ಇ.ಡಿ ವಿಚಾರಣೆಗೆ ಹಾಜರಾದ ಜಮೀರ್ ಅಹ್ಮದ್

Prasthutha|

ನವದೆಹಲಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿ ಇ.ಡಿ  ವಿಚಾರಣೆ ಎದುರಿಸಿದರು.

- Advertisement -

ಇ.ಡಿ ಕಚೇರಿಗೆ ದಾಖಲೆಗಳೊಂದಿಗೆ ಹಾಜರಾದ ಜಮೀರ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ತನಿಖಾಧಿಕಾರಿಗಳ ಸೂಚನೆ ಮೇರೆಗೆ ಎರಡು ವಾರಗಳ ಹಿಂದೆ ಅಗತ್ಯ ದಾಖಲೆ ಸಲ್ಲಿಸಿದ್ದೆ. ನಾಲ್ಕೆದು ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದು, ಸೂಕ್ತ ಉತ್ತರ ನೀಡಿದ್ದೇನೆ ಎಂದು ವಿಚಾರಣೆ ನಂತರ ಜಮೀರ್ ಸುದ್ದಿಗಾರರಿಗೆ ತಿಳಿಸಿದರು.

- Advertisement -

ಐಎಂಎ ವಂಚನೆ ಪ್ರಕರಣಕ್ಕೂ, ಈ ವಿಚಾರಣೆಗೂ ಸಂಬಂಧ ಇಲ್ಲ. ನನ್ನ ನಿವಾಸದ ಮೇಲೆ ನಡೆದ ದಾಳಿ, ಸಾರಿಗೆ ವ್ಯವಹಾರದ ಬಗ್ಗೆ ಮಾಹಿತಿ ಕೇಳಲಾಯಿತು. ಮನೆ ಕಟ್ಟಲು ಖರೀದಿಸಲಾದ ಭೂಮಿಯ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿಲ್ಲ ಎಂದು ಹೇಳಿದರು.

Join Whatsapp