ನಂದಿಬೆಟ್ಟದಲ್ಲಿ ಟ್ರಕ್ಕಿಂಗ್’ಗೆ ಹೋಗಿ ಆಳಕ್ಕೆ ಬಿದ್ದಿದ್ದ ಯುವಕ‌, ಹೆಲಿಕಾಪ್ಟರ್’ನಿಂದ ರಕ್ಷಣೆ

Prasthutha|

ಬೆಂಗಳೂರು: ಪ್ರವಾಸಿ ಕ್ಷೇತ್ರ ನಂದಿಬೆಟ್ಟದಲ್ಲಿ ಟ್ರಕ್ಕಿಂಗ್ ಗೆ ಹೋಗಿ ಆಳಕ್ಕೆ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದ ಯುವಕನೊಬ್ಬನನ್ನು ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ದೆಹಲಿ ಮೂಲದ ನಿಶಾಂತ್ ಗುಲ್ (19) ಅವರನ್ನು ಏರ್ ಫೋರ್ಸ್ ಅಧಿಕಾರಿಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಬೆಟ್ಟದಿಂದ ಅಪಾಯಕಾರಿ ಜಾಗಕ್ಕೆ ಬಿದ್ದಿದ್ದರಿಂದ ನಿಶಾಂತ್ ಬೆನ್ನಿಗೆ ಗಂಭೀರ ಗಾಯವಾಗಿದೆ.
ಪರಿಣಾಮ ಹೆಲಿಕಾಪ್ಟರ್ ಮೂಲಕವೇ ಯಲಹಂಕ ಏರ್ ಬೇಸ್‍ಗೆ ನಿಶಾಂತ್‍ನನ್ನು ರವಾನಿಸಿ ಅಲ್ಲಿಂದ ಅಸ್ಟರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ.
ಹೆಲಿಕಾಪ್ಟರ್ ಮೂಲಕ ನಿಶಾಂತ್ ರಕ್ಷಣೆಗಾಗಿ ವಿಂಗ್ ಕಮಾಂಡರ್ ಹರಸಾಹಸ ಪಡುತ್ತಿದ್ದರು ಅಲ್ಲದೆ ಈ ವೇಳೆ ನಿಶಾಂತ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಹುಡುಕಲು ಇನ್ನೂ ಕಷ್ಟವಾಗುತ್ತೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಕೊನೆಯಲ್ಲಿ ಎನ್ ಡಿಆರ್ ಎಫ್ ತಂಡ ಸಹ ನಿಶಾಂತ್ ಸಹಾಯಕ್ಕೆ ಆಗಮಿಸಿದ್ದು ರಕ್ಷಣಾ ಪಡೆಗಳು ಸ್ಥಳೀಯ ಪೊಲೀಸರ ಪರಿಶ್ರಮದ ಪರಿಣಾಮವಾಗಿ ಆತ ಬದುಕುಳಿದಿದ್ದಾನೆ.
ಘಟನೆ ವಿವರ:
ದೆಹಲಿ ಮೂಲದ ನಿಶಾಂತ್ ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದು ವಾರಾಂತ್ಯದ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ಬಂದಿದ್ದಾನೆ.
ಈ ವೇಳೆ ಸ್ನೇಹಿತರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಟ್ರೆಕ್ಕಿಂಗ್ ಮಾಡುವ ವೇಳೆ ನಿಶಾಂತ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ.
ಆತನೇ ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ. ಅವರಿಗೆ ಈ ಯುವಕ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಪತ್ತೆಯಾಗಿದ್ದನು. ಮಧ್ಯಾಹ್ನದಿಂದ ರಕ್ಷಣಾ ಕಾರ್ಯ ನಡೆಸಲಾಗಿತ್ತು ಎಂದು ಎಸ್ ಪಿ‌ ಮಿಥುನ್ ಕುಮಾರ್ ತಿಳಿಸಿದ್ದಾರೆ

Join Whatsapp