ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತ್ಯು

Prasthutha|

ಕೊರ್ಬಾ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಮೃತ ಕಾರ್ಮಿಕನನ್ನು ಸುಮನ್ ತಿಗ್ಗಾ ಎಂದು ತಿಳಿದು ಬಂದಿದೆ.


ರಾಷ್ಟ್ರಧ್ವಜವನ್ನು ಕಟ್ಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮಣೇಂದ್ರಗಢ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ಕುರ್ರೆ ಅವರು ತಿಳಿಸಿದ್ದಾರೆ.

- Advertisement -

ಕಾರ್ಮಿಕರ ಸಂಘ ತಿಗ್ಗಾ ಸಾವಿನ ನಂತರ ಪ್ರತಿಭಟನೆ ನಡೆಸಿದ್ದು, ಮೃತನ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಕುರ್ರೆ ಅವರು ತಿಳಿಸಿದ್ದಾರೆ.