ಛತ್ತರ್ ಪುರ, (ಮಧ್ಯಪ್ರದೇಶ): ನಿಂತಿದ್ದ ರೈಲಿನ ಇಂಜಿನ್ ನ ಮೇಲೆ ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ರೈಲು ನಿಲ್ದಾಣದಲ್ಲಿ ನಿನ್ನೆ ನಡೆದಿದೆ.
” ಮೃತ ಬಾಲಕನನ್ನು ಸುಹೇಲ್ ಮನ್ಸೂರಿ ಎಂದು ಗುರುತಿಸಲಾಗಿದ್ದು, ನಿಂತಿದ್ದ ರೈಲಿನ ಇಂಜಿನ್ ಮೇಲೆ ಹತ್ತಿದ ನಂತರ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾನೆ” ಎಂದು ಛತ್ತರ್ ಪುರ್ ರೈಲ್ವೆ ಸ್ಟೇಷನ್ ಮಾಸ್ಟರ್ ಶುಭಾಂಕ್ ಪಟೇಲ್ ಹೇಳಿದ್ದಾರೆ.
ಘಟನೆಯಿಂದ ಕುಪಿತಗೊಂಡ ಕೆಲ ಯುವಕರು ಠಾಣಾಧಿಕಾರಿ ಕಚೇರಿಯ ಬಾಗಿಲಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಅವರು ಸ್ಟೇಷನ್ ಮಾಸ್ಟರ್ ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರ ಬ್ಯಾಗ್ ಮತ್ತು ವಾಚ್ ಅನ್ನು ಕಸಿದುಕೊಂಡಿದ್ದಾರೆ ಎಂದು ಆರ್ ಪಿಎಫ್ ಅಧಿಕಾರಿ ತಿಳಿಸಿದ್ದಾರೆ.
” ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ನಂತರ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.