ಮೈಸೂರು: ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಹೇಮಂತ್ ಅಲಿಯಾಸ್ ಸ್ವಾಮಿ(23)ಕೊಲೆಯಾದ ಯುವಕನ
ಸಾಗರ್, ಪ್ರತಾಪ್, ಮಂಜು ಎಂಬುವರಿಂದ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಹೇಮಂತ್ ಸಹೋದರಿಯನ್ನು ಆರೋಪಿ ಸಾಗರ್ ಪ್ರೀತಿಸುತ್ತಿದ್ದನೆಂದು ಕೇಳಿಬಂದಿದ್ದು, ಇದೇ ವಿಚಾರಕ್ಕೆ ಹೇಮಂತ್ ನ ನಡುವೆ ವೈಷಮ್ಯ ಏರ್ಪಟಿದೆ. ಈ ಹಿನ್ನಲೆ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.