ನಿರುದ್ಯೋಗಿ ದಿನವಾಗಿ ಮೋದಿ ಜನ್ಮದಿನ ಆಚರಿಸಿದ ಯುವ ಕಾಂಗ್ರೆಸ್

Prasthutha|

ನವದೆಹಲಿ: ಇಂದು ಪ್ರಧಾನಿ ಮೋದಿ ಅವರ 72ನೇ ಜನ್ಮದಿನವಾಗಿದೆ. ಈ ದಿನವನ್ನು ಭಾರತೀಯ ಯುವ ಕಾಂಗ್ರೆಸ್ ದೇಶಾದ್ಯಂತ ನಿರುದ್ಯೋಗ ದಿನವಾಗಿ ಆಚರಿಸಿದೆ.

- Advertisement -

ನಿರುದ್ಯೋಗ ಸಮಸ್ಯೆ ಕುರಿತು ಗಮನಸೆಳೆಯಲು ಕಾಂಗ್ರೆಸ್‌ ಯುವ ಘಟಕದ ಕಾರ್ಯಕರ್ತರು, ಕಪ್ಪು ಬಣ್ಣದ ಟೀಶರ್ಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರವು ಯುವಜನರಿಗೆ ನಿರುದ್ಯೋಗದ ಉಡುಗೊರೆ ನೀಡಿದೆ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಹೇಳಿದ್ದಾರೆ.

- Advertisement -

ಸದ್ಯ ದೇಶದಲ್ಲಿ ಶೇ. 60ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು,  ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ ಅದನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.



Join Whatsapp