ಪಡುಬಿದ್ರಿ: ಖಾಲಿ ತಟ್ಟೆ, ಚೀಲ ಹಿಡಿದು ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Prasthutha|

ಪಡುಬಿದ್ರಿ: “ನಾವೂ ಬದುಕಬೇಕು” ಅನ್ನೋ ಘೋಷವಾಕ್ಯದಡಿ ಕಾಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಸರಕಾರದ ವಿರುದ್ಧ ಖಾಲಿ ತಟ್ಟೆ ಹಾಗೂ ಖಾಲಿ ಚೀಲಗಳನ್ನ ಹಿಡಿದು ವಿನೂತನ ರೀತಿಯ ಪ್ರತಿಭಟನೆ ಪಡುಬಿದ್ರಿಯಲ್ಲಿ ನಡೆಯಿತು.

- Advertisement -

ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, “ಕೊರೊನಾ‌ ಲಾಕ್ಡೌನ್ನಿಂದ ದುಡಿಯುವ ವರ್ಗ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ರೀತಿ ಸ್ಪಂದಿಸದೆ ಇರುವುದರಿಂದ ಜನ ಸಾಮಾನ್ಯರ ಬದುಕು ಬರಡಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ದಲಿತ, ಅಲಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಸಮುದಾಯಗಳಿಗೆ ಉಚಿತ ಕೋವಿಡ್ ಚಿಕಿತ್ಸೆ ನೀಡಬೇಕು ಹಾಗೂ ಎಲ್ಲ ವರ್ಗದ ಶ್ರಮಿಕರಿಗೂ ಹಣಕಾಸಿನ ನೆರವು ನೀಡಬೇಕು. ಜೊತೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಬೇಕು” ಎಂದು ಅವರು ಅಗ್ರಹಿಸಿದರು.


ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಎಸ್.ಸಿ.& ಎಸ್.ಟಿ ಸಮಿತಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಹೆಜಮಾಡಿ, ಪಡುಬಿದ್ರಿ ಗ್ರಾ.ಪಂ. ಮಾಜಿ ಸದಸ್ಯ ಅಬ್ದಲ್ ಖಾದರ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಹೆಜಮಾಡಿ, ಕಾಪು ಯುವ ಕಾಂಗ್ರೆಸ್ ಕಾರ್ಯದರ್ಶಿ ಕೀರ್ತಿಕುಮಾರ್ ಪಡುಬಿದ್ರಿ, ಯುವ ಕಾಂಗ್ರೆಸ್ ನಾಯಕರಾದ ಶ್ರೀಧರ್ ಆಚಾರ್ಯ ಪಾದೆಬೆಟ್ಟು, ಮಹಮದ್ ಇಕ್ಬಾಲ್, ಸಂಪತ್ ಹೆಜಮಾಡಿ, ರಜಾಕ್ ಹೆಜಮಾಡಿ ಉಪಸ್ಥಿತರಿದ್ದರು.



Join Whatsapp