ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ; ಆರೋಪಿಗಳು ಅರೆಸ್ಟ್

Prasthutha|

ಬೆಂಗಳೂರು: 25 ವರ್ಷದ ಯುವತಿಯೊಬ್ಬಳ ಮೇಲೆ ಖಾಸಗಿ ಟ್ರಾವೆಲ್ಸ್ ನ ಇಬ್ಬರು ಚಾಲಕರು ಮದ್ಯ ಕುಡಿಸಿ ಅತ್ಯಾಚಾರ ಮಾಡಿದ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಅಖಿಲೇಶ್ ಮತ್ತು ದೀಪು ಎಂಬ ಇಬ್ಬರು ಆರೋಪಿಗಳನ್ನು ವಿವೇಕ್ ನಗರ ಪೊಲೀಸರು ಬಂಧಿಸಿದ್ದಾರೆ. ಕೆಲಸವಿಲ್ಲದೆ ಇದ್ದ ಯುವತಿಯನ್ನು ಪರಿಚಯ ಮಾಡಿಕೊಂಡ ಆರೋಪಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.


ಹೆಚ್ಎಎಲ್ ಬಳಿಯ ಖಾಲಿ ಮೈದಾನ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಊಟ ಮಾಡಿ, ತಾವಿಬ್ಬರೂ ಮದ್ಯ ಸೇವಿಸಿದ್ದಲ್ಲದೇ ಯುವತಿಗೂ ಮದ್ಯ ಕುಡಿಸಿದ್ದಾರೆ. ಬಳಿಕ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Join Whatsapp