ಮಂಗಳೂರು: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು

Prasthutha|

ಮಂಗಳೂರು: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಶ್ರಾವ್ಯ (22) ಮೃತ ಯುವತಿ ಎಂದು ಗುರುತಿಸಲಾಗಿದೆ.

ಮನೆಯ ಬಾತ್ ರೂಂ ನ ಕಿಟಕಿ ಬಳಿ ಯಾವಾಗಲೂ ಟೂಥ್ ಪೇಸ್ಟ್ ಇಡುತ್ತಿದ್ದರು. ಆದರೆ ಆ ಟೂಥ್ ಪೇಸ್ಟ್ ಪಕ್ಕದಲ್ಲೇ ಇಲಿ ಪಾಷಾಣದ ಪೇಸ್ಟ್ ಇತ್ತು. ಕತ್ತಲಿದ್ದಿದ್ದರಿಂದ ತಿಳಿಯದೆ ಇಲಿ ಪಾಷಾಣವನ್ನೇ ಯುವತಿ ಕೈಗೆತ್ತಿಕೊಂಡಿದ್ದಳು. ಹಲ್ಲುಜ್ಜುವಾಗ ಇಲಿ ಪಾಷಾಣ ಎಂದು ತಡವಾಗಿ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಶ್ರಾವ್ಯಳನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾರೆ.



Join Whatsapp