ಯುವಕನ ಎದೆಗೆ ಸ್ಕ್ರೂಡ್ರೈವರ್’ನಿಂದ ಚುಚ್ಚಿ ಭೀಕರ ಕೊಲೆ

Prasthutha|

ಬೆಳಗಾವಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನ ಎದೆಗೆ ಸ್ಕ್ರೂಡ್ರೈವರ್’ನಿಂದ ಚುಚ್ಚಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಮಚ್ಚೆ ಬಳಿ ಯಳ್ಳೂರ ರಸ್ತೆಯಲ್ಲಿ ನಡೆದಿದೆ.

- Advertisement -


ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ್ (21) ಹತ್ಯೆಯಾದ ಯುವಕ. ಆತ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುವಾಗ ಕೊಲೆ ಮಾಡಲಾಗಿದೆ. ಪ್ರತೀಕ್ ಸ್ನೇಹಿತನ ಜೊತೆಗೆ ಕೆಲವರು ಜಗಳ ಆಡುತ್ತಿದ್ದರು. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಪ್ರತೀಕ್’ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಹಲವು ಬಾರಿ ದುಷ್ಕರ್ಮಿಗಳು ಪ್ರತೀಕ್ ಜತೆಗೆ ಜಗಳವಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತ ಜಗಳ ಬಿಡಿಸಲು ಬರುತ್ತಿದ್ದಂತೆ ಪ್ರತೀಕ್’ನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ಬೈಕ್’ನಲ್ಲಿದ್ದ ಸ್ಕ್ರೂಡ್ರೈರ್’ನಿಂದ ಎದೆಗೆ ಚುಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp