ಭದ್ರಕಾಳಿ ಉತ್ಸವದಲ್ಲಿ ಹಾಡು ಹೇಳದ ಪರಿಶಿಷ್ಟ ಜಾತಿಯ ಯುವಕನಿಗೆ ಹಲ್ಲೆ; ಐವರ ಬಂಧನ

Prasthutha|

ಕೊಡಗು: ದೇವರ ಹಾಡು ಹೇಳಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ ಪರಿಶಿಷ್ಟ ಜಾತಿಯ ಯುವಕನಿಗೆ ಥಳಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕುಮಾರಹಳ್ಳಿಯಲ್ಲಿ ನಡೆದಿದೆ.

- Advertisement -

ಹಲ್ಲೆಗೊಳಗಾದ ಯುವಕನನ್ನು ಕುಮಾರಳ್ಳಿ ಗ್ರಾಮದ ನೀಲರಾಜು ಎಂದು ಗುರುತಿಸಲಾಗಿದೆ. ಇದೀಗ ಗಾಯಗೊಂಡ ಯುವಕ  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕುಮಾರಳ್ಳಿಯ ಶ್ರೀ ಭದ್ರಕಾಳಿ ಉತ್ಸವದಲ್ಲಿ ನೀಲರಾಜು ಕುಟುಂಬದ ಹಿರಿಯರು ದೇವರ ಹಾಡು ಹೇಳುತ್ತಿದ್ದರು. ಈ ವೇಳೆ ದೇವರ ಕೆಲಸ ಮಾಡಲು ಹೋಗಿದ್ದ ನೀಲರಾಜುವನ್ನು ಅಲ್ಲಿದ್ದ ಕೆಲವರು ದೇವರ ಹಾಡು ಹೇಳುವಂತೆ ಒತ್ತಾಯಪಡಿಸಿದರು. ಆದರೆ ನನಗೆ ಹಾಡಲು ಬರುವುದಿಲ್ಲ ಎಂದು ಹೇಳಿದ ಕಾರಣಕ್ಕೆ ದೊಣ್ಣೆಯಿಂದ ತಲೆಭಾಗಕ್ಕೆ ಹೊಡೆದು ತೀವ್ರ ಹಲ್ಲೆ ನಡೆಸಿ ಕೊಲ್ಲಲು ಪ್ರಯತ್ನಿಸಿದರು ಎಂದು ಗಾಯಾಳು ನೀಲರಾಜನ ಸಹೋದರ ಪ್ರಸನ್ನ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕುಮಾರಳ್ಳಿ ಗ್ರಾಮದ ಗುರಪ್ಪ, ಲಜುಕುಮಾರ್, ಹರ್ಷ, ಕೃಷ್ಣ, ಹಾಗೂ ದರ್ಶನ್ ಎಂಬ ಐವರನ್ನು ಬಂಧಿಸಿದ್ದಾರೆ.



Join Whatsapp