ವಿದೇಶಕ್ಕೆ ತೆರಳಿದ ಮರುದಿನವೇ ಯುವಕ ಹೃದಯಾಘಾತದಿಂದ ಮೃತ್ಯು

Prasthutha|


ಕೋಝಿಕ್ಕೋಡ್: ಒಂದು ತಿಂಗಳ ರಜೆ ಕಳೆದು ಮತ್ತೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ ಮರುದಿ‌ನವೇ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ.

- Advertisement -


ಮಯ್ಯನ್ನೂರು ಚೆರಿಯಪರಂಬ ನಿವಾಸಿ ಝಾಕೀರ್ (33)ಮೃತ ಯುವಕ. ದುಬೈನಲ್ಲಿ ಕೆಲ ವರ್ಷಗಳಿಂದ ಲಿಪ್ಟ್ ಆಪರೇಟರ್ ಆಗಿ ಕೆಲಸ‌ ಮಾಡುತ್ತಿದ್ದ ಝಾಕೀರ್ ನಿಧನಕ್ಕೆ ಹೃದಯಾಘಾತ ಕಾರಣ ಎನ್ನುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

- Advertisement -

ಝಾಕಿರ್ ರವರು ಊರಿನಿಂದ ಮರಳುವ ಸಂದರ್ಭದಲ್ಲಿ ಕೊನೆಯ ಬಾರಿಗೆ ತನ್ನ ತಾಯಿಯ ಕೈಯಿಂದ ಊಟದ ತುತ್ತು ತೆಗೆದುಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.



Join Whatsapp