ರಸ್ತೆ ಅಪಘಾತದಲ್ಲಿ ಯುವಕ ಸಾವು; ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

Prasthutha|

ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಲು ಆತನ ಕುಟುಂಬ ನಿರ್ಧರಿಸಿದೆ.

- Advertisement -


ಮೃತ ಯುವಕನನ್ನು ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ನಿವಾಸಿ ಕೀರ್ತಿ(24) ಎಂದು ಗುರುತಿಸಲಾಗಿದೆ. ವಿಜಯಪುರದಲ್ಲಿರುವ ಅಕ್ಕನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೀರ್ತಿಗೆ ನವಚೇತನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಕೀರ್ತಿಯ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.


ಕೀರ್ತಿಯ ದೇಹದಿಂದ ಕಿಡ್ನಿ, ಹೃದಯ ಮತ್ತು ಕಣ್ಣುಗಳನ್ನು ತೆಗೆಯಲಾಗಿದ್ದು, ಮೂರು ಮಂದಿಗೆ ಅಳವಡಿಸಲಾಗಿದೆ.



Join Whatsapp