ಜ.22 ರಂದು ರಜೆ ಘೋಷಿಸದ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ

Prasthutha|

ಉಡುಪಿ: ಜ.22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ರಜೆ ಘೋಷಿಸದ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಎಂದಿದ್ದಾರೆ‌.

- Advertisement -

ಹಿಂದೂಗಳ ಭಾವನೆಗೆ ಅಪಮಾನ‌ ಮಾಡುವ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳಿಗೆ ಅವಮಾನ ಮಾಡುವ ಮೂಲಕವೇ ಮುಸ್ಲಿಂ ಮತ ಗಳಿಸುವ ಹುನ್ನಾರ ನಡೆಸುತ್ತದೆ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಹಬ್ಬದ ವಾತಾವರಣವಿದೆ. ಪ್ರತಿಯೊಬ್ಬನ ಮನಸಲ್ಲಿ ರಾಮ ಮಂದಿರದ ಸಂಭ್ರಮ ಇದೆ. ನಂಬಿಕೆಗೆ ಅಪಮಾನ ಮಾಡುವುದು ಒಂದು ಸಂಘಟನೆಯ ನಾಶದ ಸಂಕೇತ. ಸಿದ್ದರಾಮಯ್ಯ ನಿಜವಾಗಲೂ ಜಾತ್ಯತೀತರಾದರೆ ರಜೆ ಘೋಷಿಸಲಿ. ಒಂದೇ ಕೋಮಿನ ವ್ಯವಸ್ಥೆಯಿಂದ ಹೊರಗೆ ಬರಲು‌ ಅವಕಾಶ ಇದೆ. ರಜೆ ಕೊಡುವ ಸದ್ಬುದ್ಧಿಯನ್ನು ಪ್ರಭು ಶ್ರೀರಾಮ ಚಂದ್ರ ನೀಡಲಿ. ಈಗಾಗಲೇ ರಾಮ ಹಲವರಿಗೆ ಒಳ್ಳೇ ಬುದ್ದಿ ಕೊಟ್ಟಿದ್ದಾರೆ. ಸಿದ್ದರಾಮಯ್ಯರಿಗೂ ಕೊಡಲಿ ಎಂದಿದ್ದಾರೆ.

Join Whatsapp