ದಾವಣಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲೆಯ 2024-27 ರ ಅವಧಿಯ ಜಿಲ್ಲಾಧ್ಯಕ್ಷರಾಗಿ ಯಹಿಯಾ ಮರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೊಹಮ್ಮದ್ ರಿಯಾಝ್ ರಜ್ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎ ಆರ್ ತಾಹೀರ್, ಕಾರ್ಯದರ್ಶಿಗಳಾಗಿ ಮೊಹಮ್ಮದ್ ಮೋಹಸಿನ್, ಮೊಹಮ್ಮದ್ ಜುನೈದ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಅಜರುದ್ದೀನ್, ಹಾಗೂ ಸಮಿತಿ ಸದಸ್ಯರಾಗಿ
ಇಸ್ಮಾಯಿಲ್ ಜಬಿವುಲ್ಲ, ಸೈಯದ್ ಅಶ್ಫಾಖ್, ಸೈಯದ್ ರೆಹಮಾನ್, ಶೋಯಿಬ್, ಝಬಿವುಲ್ಲಾ ರವರು ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಕಾರ್ಯದರ್ಶಿ ಸೈಯದ್ ಅಕ್ರಮ್ ಮೌಲಾನ ನಡೆಸಿಕೊಟ್ಟರು.
ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ “ನುಡಿದಂತೆ ನಡೆದಿಲ್ಲ” ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಲಾಗಿದ್ದು ಮುಂದಿನ ಬಜೆಟ್ ನಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲು ಅಲ್ಪಸಂಖ್ಯಾತ ಶಾಸಕರು ಸಚಿವರುಗಳ ಸಹಿತ ಅಲ್ಪಸಂಖ್ಯಾತ ಮತಗಳನ್ನು ಪಡೆದು ಗೆದ್ದು ಬಂದಿರುವ ಎಲ್ಲಾ ಕಾಂಗ್ರೆಸ್ ನ ಶಾಸಕರುಗಳು ಸರ್ಕಾರದ ಮೇಲೆ ಒತ್ತಡ ಹೇರಲು ಆಗ್ರಹಿಸಿದರು.
ರಾಜ್ಯದ ಬೊಕ್ಕಸದ 168 ಕೋಟಿ ಖರ್ಚು ಮಾಡಿ ತಯಾರಿಸಿರುವ ಜಾತಿ ಜನಗಣತಿ (ಕಾಂತರಾಜ್ ವರದಿ ) ವರದಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಾತಿಗಳ ಆರ್ಥಿಕ ಶೈಕ್ಷಣಿಕ ,ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕ ಅಂಶಗಳಿವೆ.
ವರದಿಯಲ್ಲಿ ಎಸ್ಸಿ , ಎಸ್ ಟಿ ಮತ್ತು ಮುಸ್ಲಿಮರಿಗೆ ಅವರ ಜನಸಂಖ್ಯಾವಾರು ಸಿಗಬೇಕಾದ ಮೀಸಲಾತಿ ಮತ್ತು ಸೌಲಭ್ಯಗಳಿಗೆ ಇಲ್ಲಿನ ಶಾಸಕರು ಮತ್ತು ಅವರ ಪಟಾಲಂ ವರದಿ ಬಿಡುಗಡೆ ಮಾಡದಂತೆ ಸರ್ಕಾರದ ಮೇಲೆ ಪ್ರಭಾವ ಬೀರಿ ಅವರಿಗೆ ಅವರ ಹಕ್ಕುಗಳು ದೊರಕದಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಅಭಿಪ್ರಾಯಪಟ್ಟರು.