ಸಿಬ್ಬಂದಿ ನಿರ್ಲಕ್ಷ್ಯ | ಆಸ್ಪತ್ರೆ ಕಾರಿಡಾರ್‌ನಲ್ಲೇ ಹೆರಿಗೆ!

Prasthutha|

ಯಾದಗಿರಿ: ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯ ಕಾರಿಡಾರ್ ನಲ್ಲೇ ಹೆರಿಗೆಯಾದ ಘಟನೆ ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಶನಿವಾರ ಮಧ್ಯರಾತ್ರಿ ಆಸ್ಪತ್ರೆ ಆವಣದಲ್ಲಿ ‘ಹೊಟ್ಟೆಯಿಂದ ಕೂಸು ಹೊರಬಂದಿದೆ’ ಎಂದು ಗೋಳಾಡಿ ಕರೆದರೂ ಸಿಬ್ಬಂದಿ ನೆರವಿಗೆ ಬರಲಿಲ್ಲ. ಸಿಬ್ಬಂದಿ ಬಾರದ ಕಾರಣ ಹೆರಿಗೆ ವೇಳೆ ಬಟ್ಟೆಯಿಂದ ಪತಿ ನವಾಜ್ ಮರೆಮಾಚಿದ್ದಾರೆ. ಕೊನೆಗೆ ಆಸ್ಪತ್ರೆ ಆವಣದಲ್ಲೇ ನರಳಾಡಿದ ಚಾಂದ್‌ಬಿ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

‘ನಮಗೆ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಲಿಲ್ಲ. ಮಗು ಹೊರಬಂದಿದೆ ಬನ್ನಿ ಅಂದರೂ ಬರಲಿಲ್ಲ’ ಎಂದು ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದರೆ ಸಹಾಯ ಆಗುತ್ತಿತ್ತು. ಹೆರಿಗೆ ರಕ್ತದ ಮಡುವಿ‌‌ನಲ್ಲಿ ಪತ್ನಿ ಇದ್ದರು‌’  ಎಂದು ಚಾಂದ್‌ಬಿ ಪತಿ ನವಾಜ್ ನೋವು ತೊಡಿಕೊಂಡಿದ್ದಾರೆ.

- Advertisement -



Join Whatsapp