ಕುಸ್ತಿಪಟುಗಳ ಮೇಲೆ ಅತ್ಯಾಚಾರವಾದರೆ ದೇಶದ ಮೇಲೆ ಅತ್ಯಾಚಾರವಾದಂತೆ: ನಟ ಕಿಶೋರ್

Prasthutha|

ಬೆಂಗಳೂರು: ಕಳೆದ ಹಲವು ದಿನಗಳಿಂದ ಭಾರತದ ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಷನ್ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿರುವ ನಟ ಕಿಶೋರ್, ಕುಸ್ತಿಪಟುಗಳ ಮೇಲೆ ಅತ್ಯಾಚಾರವಾದರೆ ದೇಶದ ಮೇಲೆ ಅತ್ಯಾಚಾರವಾದಂತೆ ಎಂದು ಹೇಳಿದ್ದಾರೆ.

- Advertisement -

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಿಶೋರ್, ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದಿದ್ದು ನಿಜವಾದರೆ, ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ. ಇಂದು ಅವರು ಸೋತರೆ ಭಾರತ ಸೋಲುತ್ತದೆ. ದೇಶದ ಗೌರವ ಹೆಚ್ಚಾಗುವುದು ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ಮೆರವಣಿಗೆಯ ನಾಟಕಗಳಿಂದಲ್ಲ. ಜೀವ ತೇಯ್ದು ಬೆವರು ಹರಿಸಿ ಈ ಪಟುಗಳು ತಂದ ಮೆಡಲ್’ಗಳಿಂದ ಎಂದು ಕಟುವಾಗಿ ಟೀಕಿಸಿದ್ದಾರೆ.

ಒಲಿಂಪಿಕ್ಸ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಕ್ರೀಡಾಪಟುಗಳು ಈ ವರ್ಷದ ಜನವರಿಯಲ್ಲಿ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಮಹಿಳಾ ಕ್ರೀಡಾಪಟುಗಳಿಗೆ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.