ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ: ಇಬ್ಬರಿಗೆ ಗಾಯ

Prasthutha|

ನವದೆಹಲಿ: ಜಂತರ್ ಮಂತರ್ ನಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ರಾತ್ರಿ ಹೊಡೆದಾಟ ನಡೆದಿದ್ದು, ಇಬ್ಬರು ಕುಸ್ತಿಪಟುಗಳ ತಲೆಗೆ ಗಾಯವಾಗಿದೆ.

- Advertisement -


ಪ್ರತಿಭಟನಾ ಸ್ಥಳಕ್ಕೆ ತಮ್ಮ ಹಾಸಿಗೆಗಳನ್ನು ತರಲು ಯತ್ನಿಸಿದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಅನೇಕ ಕುಸ್ತಿಪಟುಗಳ ತಲೆಗೆ ಏಟು ಬಿದ್ದಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಓರ್ವ ಕುಸ್ತಿಪಟು ಘರ್ಷಣೆಯಲ್ಲಿ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಕುಸ್ತಿಪಟುಗಳ ಜೊತೆಗೆ ಕಟುವಾಗಿ ವರ್ತಿಸಿದ್ದಾನೆ. ಹಾಸಿಗೆಗಳನ್ನು ಪಡೆದುಕೊಳ್ಳುತ್ತಿರುವ ಅಲ್ಲಿಗೆ ಬಂದ ಅಧಿಕಾರಿ ಅನುಮತಿಯಿಲ್ಲದೇ ನೀಡಲು ಸಾಧ್ಯವಿಲ್ಲ ಎಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಹಿಳಾ ಕುಸ್ತಿಪಟುಗಳೂ ಎನ್ನದೇ ಅವರನ್ನು ದೂಡಿದ್ದಾನೆ. ಈ ವೇಳೆ ಇತರೆ ಪೊಲೀಸ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ.

- Advertisement -

Join Whatsapp