ನಾಗರಿಕ ಸಚಿವರ ಅನಾಗರಿಕ ಮಾತಿಗೆ ಧಿಕ್ಕಾರ : ವೆಲ್ಫೇರ್ ಪಾರ್ಟಿ

Prasthutha|

ಬೆಂಗಳೂರು : ಬಡವರ ಬಗ್ಗೆ ಕಾಳಜಿ ಮತ್ತು ಗೌರವವಿಲ್ಲದೆ ಉದ್ಧಟತನದಿಂದ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಖಂಡನಿಯ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಆಕ್ರೋಶ ಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ತನ್ನ ಜೀವನ ಶೈಲಿಯನ್ನು ಬಡವರಿಗೆ ಹೋಲಿಕೆ ಮಾಡಿ ಕೇವಲ 5 ಕೆಜಿ ಅಕ್ಕಿ ಸಾಕು ಎಂದು ಅಪ್ರಾಯೋಗಿಕವಾದ ವಾದ ಮಂಡಿಸಿ ಬಡವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನನಗೆ ಎರಡು ಚಪಾತಿ, ಒಂದಿಷ್ಟು ಅನ್ನ ಸಾಕು ಎಂದೇಳುವ ಮೂಲಕ ತನ್ನ ಮೊಂಡು ವಾದವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವ ಸಚಿವ ಉಮೇಶ್ ಕತ್ತಿಯವರ ಹೇಳಿಕೆ ಅನಾಗರಿಕವಾದುದು ಎಂದು ಟೀಕಿಸಿದ್ದಾರೆ.

- Advertisement -


ಒಬ್ಬ ಮನುಷ್ಯ ಊಟವನ್ನೂ ಅಳೆಯುವ ನಿಮ್ಮ ಮನಸ್ಥಿತಿ ಕೆಟ್ಟಿದೆ. ವಯಸ್ಸಾದ ನೀವೇ ಇಷ್ಟು ತಿನ್ನುತ್ತೇನೆ ಎನ್ನುವಾಗ ಇಷ್ಟಕ್ಕೆ ಯುವಕರ ಹೊಟ್ಟೆ ತುಂಬುವುದೇ? ಬಿಜೆಪಿ ಸರಕಾರದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯಲ್ಲಿ ಜನ ಸಾಯಬೇಕೆ? ದುಡಿಯುವ ವರ್ಗದ ಜನರ ಶಾಪ ನಿಮಗೆ ತಟ್ಟದೇ ಇರದು.

ಕೂಡಲೇ ಸರಕಾರ ಇಂತಹ ತಲೆಯಿಲ್ಲದ ಮಂತ್ರಿಗಳ ಆದೇಶಗಳನ್ನು ತಹಬಂದಿಗೆ ತಂದು, ಜನಸಾಮಾನ್ಯರ ಬವಣೆಗೆ ಸ್ಪಂದಿಸಬೇಕು. ಜೊತೆಗೆ ಗುಣಮಟ್ಟದ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Join Whatsapp