ಕೇಂದ್ರ ಸರ್ಕಾರವನ್ನು ರಾಷ್ಟ್ರವಿರೋಧಿ ಎಂದು ಉಲ್ಲೇಖಿಸುತ್ತೀರಾ?: ಆರೆಸ್ಸೆಸ್ ನಿಯತಕಾಲಿಕಕ್ಕೆ ತಿರುಗೇಟು ನೀಡಿದ ರಘುರಾಮ್ ರಾಜನ್

Prasthutha|

ನವದೆಹಲಿ: ಕೋವಿಡ್ ಲಸಿಕೆ ಹಾಕಿಸುವಲ್ಲಿ ಕಳಪೆ ಪ್ರದರ್ಶನ ತೋರಿದ ಒಕ್ಕೂಟ ಸರ್ಕಾರವನ್ನು ರಾಷ್ಟ್ರ ವಿರೋಧಿ ಎಂದು ಉಲ್ಲೇಖಿಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ಆರೆಸ್ಸೆಸ್ ನಿಯತಕಾಲಿಕಕ್ಕೆ ಆರ್.ಬಿ.ಐ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ತಿರುಗೇಟು ನೀಡಿದ್ದಾರೆ.

ತೆರಿಗೆ ಸಲ್ಲಿಸುವ ವೆಬ್ ಸೈಟ್ ನಲ್ಲಿ ಐಟಿ ಸಂಸ್ಥೆಯ ಅಸಮರ್ಥತೆಯನ್ನು ಮುಚ್ಚಿಡುವ ಸಲುವಾಗಿ, ಇನ್ಫೋಸಿಸ್ ಅನ್ನು ಗುರಿಯಾಗಿಸಿ ದಾಳಿ ಮಾಡಿರುವ ಬಗ್ಗೆ ಆರೆಸ್ಸೆಸ್ ನಿಯತಕಾಲಿಕದ ವರದಿಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

- Advertisement -

ಇತ್ತೀಚೆಗೆ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ಹಲವಾರು ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತಿವೆ. ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಇನ್ಫೋಸಿಸ್ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಒಕ್ಕೂಟ ಸರ್ಕಾರದ ತಪ್ಪಾದ ಆರ್ಥಿಕ ನೀತಿಯಿಂದಾಗಿ ದೇಶದ ಜಿಡಿಪಿ, ಆರ್ಥಿಕ ಸ್ಥಿತಿ ತೀವ್ರ ರೀತಿಯಲ್ಲಿ ಕುಸಿತ ಕಾಣುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಯನ್ನು ಅನಿಯಮಿತವಾಗಿ ಹೆಚ್ಚಿಸುವ ಮೂಲಕ ಹಲವಾರು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಮುಚ್ಚುವಂತೆ ಮಾಡಲಾಗಿದೆ. ಒಕ್ಕೂಟ ಸರ್ಕಾರದ ಈ ನಡೆಯನ್ನು ಆರೆಸ್ಸೆಸ್ ರಾಷ್ಟ್ರ ವಿರೋಧಿ ಎಂದು ಪರಿಗಣಿಸುತ್ತದೆಯೇ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಾಜನ್ ಪ್ರಶ್ನಿಸಿದರು.

ಮಾತ್ರವಲ್ಲ ಹೆಚ್ಚುತಿರುವ ಆದಾಯವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

- Advertisement -