ಹದಗೆಡುತ್ತಿರುವ ಉಕ್ರೇನ್‌ ಭದ್ರತಾ ಪರಿಸ್ಥಿತಿ; ಉಕ್ರೇನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

Prasthutha|

ನವದೆಹಲಿ: ಉಕ್ರೇನ್‌ನಾದ್ಯಂತ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಉಕ್ರೇನ್‌ಗೆ ಪ್ರಯಾಣಿಸದಂತೆ ಮತ್ತು ಉಕ್ರೇನ್ ನಲ್ಲಿರುವ ಭಾರತೀಯರು ತಕ್ಷಣವೇ ಆ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

- Advertisement -

ರಷ್ಯಾ ಪಡೆಗಳ ಸರಣಿ ಡ್ರೋನ್ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವ್ಯವಸ್ಥೆಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ, ರಷ್ಯಾಕ್ಕೆ ಹೆಚ್ಚಿನ ಡ್ರೋನ್‌ಗಳು ಮತ್ತು ಮೇಲ್ಮೈ ಕ್ಷಿಪಣಿಗಳನ್ನು ಒದಗಿಸುವ ಭರವಸೆ ನೀಡಿರುವ ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದೇನೆ.

- Advertisement -

ಉಕ್ರೇನಿಯನ್ನರನ್ನು ಕೊಲ್ಲಲು ರಷ್ಯಾಕ್ಕೆ ಸಹಾಯ ಮಾಡಿದ್ದಕ್ಕಾಗಿ ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದೇನೆ ಎಂದು ಹೇಳಿದರು.

Join Whatsapp