ಹೈದರಾಬಾದ್: ಮಕ್ಕಳಿಗೆ ಚಾಕೊಲೇಟ್ ಕೊಡಿಸುವ ಪೋಷಕರಿಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ತೆಲಂಗಾಣದ ಹೈದರಾಬಾದ್ ಮೆಟ್ರೋ ನಿಲ್ದಾಣದ ಅಂಗಡಿಯಿಂದ ಖರೀದಿಸಿದ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ಲ್ಲಿ ಜೀವಂತ ಹುಳು ತೆವಳುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ಸೋಷಿಯಲ್ ಮೀಡಿಯಾ ಹ್ಯಾಂಡಲ್ ಎಕ್ಸ್ನಲ್ಲಿ ರಾಬಿನ್ ಝಾಕಿಯಸ್ ಎಂಬವರು ವೀಡಿಯೋ ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ ಪ್ರಕಾರ, ಫೆಬ್ರವರಿ 9, 2024 ರಂದು ತೆಲಂಗಾಣದ ಅಂಗಡಿಯಿಂದ ಕ್ಯಾಡ್ಬರಿಯನ್ನು ಖರೀದಿಸಿದ್ದ ರತ್ನದೀಪ್ ಎಂಬವರಿಗೆ ಚಾಕೊಲೇಟ್ಲ್ಲಿ ಹುಳು ಕಂಡುಬಂದಿದೆ.
ನಗರದ ಅಮೀರ್ ಪೇಟ್ ಮೆಟ್ರೋ ನಿಲ್ದಾಣದ ಬಳಿಯ ರತ್ನದೀಪ್ ರಿಟೇಲ್ ನಿಂದ 45 ರೂ.ಗೆ ಖರೀದಿಸಿದ ಚಾಕೊಲೇಟ್ ಬಿಲ್ ನೊಂದಿಗೆ ರಾಬಿನ್ ಝಾಕಿಯಸ್ ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹುಳು ತೆವಳುತ್ತಿರುವುದನ್ನು ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೊವನ್ನು ನೋಡಿದ ತಕ್ಷಣ ಜನರು ವೀಡಿಯೊಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು.
ಈ ಮಧ್ಯೆ ಚಾಕೊಲೇಟ್ ಕಂಪನಿ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, ಖರೀದಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಜಾಕಿಯಸ್ ಅವರನ್ನು ವಿನಂತಿಸಿದೆ.
Found a worm crawling in Cadbury chocolate purchased at Ratnadeep Metro Ameerpet today..
— Robin Zaccheus (@RobinZaccheus) February 9, 2024
Is there a quality check for these near to expiry products? Who is responsible for public health hazards? @DairyMilkIn @ltmhyd @Ratnadeepretail @GHMCOnline @CommissionrGHMC pic.twitter.com/7piYCPixOx