ವಿಶ್ವದ ಮೊದಲ AC ಹೆಲ್ಮೆಟ್ ದುಬೈನಲ್ಲಿ ಬಿಡುಗಡೆ

Prasthutha|

ದುಬೈ ; ದುಬೈನಲ್ಲಿ ನಡೆಯುತ್ತಿರುವ ಎಕ್ಸ್’ಪೋ -2020ಯ ಭಾರತೀಯ ಪೆವಿಲಿಯನ್’ನಲ್ಲಿ ವಿಶ್ವದ ಮೊತ್ತಮೊದಲ AC ಹೆಲ್ಮೆಟ್’ಅನ್ನು ಬಿಡುಗಡೆ ಮಾಡಲಾಗಿದೆ.

- Advertisement -

ತೆಲಂಗಾಣ ಮೂಲದ ಸೇಫ್ಟಿ ಸ್ಟಾರ್ಟಪ್ ಕಂಪನಿ ‘ಜೆರ್ಶ್‌ ಸೇಫ್ಟಿ‘ ವಿಶ್ವದ ಮೊದಲ ‘ಎಸಿ ಸೇಫ್ಟಿ ಹೆಲ್ಮೆಟ್‘ನ್ನು ವಿನ್ಯಾಸಗೊಳಿಸಿದ್ದು, ಕಟ್ಟಡ ಕಾರ್ಮಿಕರು ಸೇರಿದಂತೆ ಹೊರಾಂಗಣ ಕಾರ್ಯಪಡೆ ಮತ್ತು ಕ್ಷೇತ್ರ ಕಾರ್ಯನಿರ್ವಾಹಕರಿಗೆ ಈ ಹೆಲ್ಮೆಟ್ ಮೀಸಲಾಗಿದ್ದು, ಮೊದಲ ಹಂತದಲ್ಲಿ ಯುಎಇ ಮಾರುಕಟ್ಟೆಯಲ್ಲಿ ವಿತರಿಸಲಾಗುವುದು ಎಂದು ಕಂಪನಿ ಹೇಳಿದೆ.
ಸಾಮಾನ್ಯ ಕಟ್ಟಡ ಕಾರ್ಮಿಕರಿಗಾಗಿ ತಯಾರಿಸಲಾಗಿರುವ ಹೆವಿ-ಡ್ಯೂಟಿ ಮಾದರಿಯಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕ್‌ ಇದೆ. ಹೆಲ್ಮೆಟ್‌ನಲ್ಲಿರುವ ನಾಲ್ಕು ರಂದ್ರಗಳ ಮೂಲಕ ಏಕರೂಪದ ಕೂಲಿಂಗ್ ಅನುಭವವನ್ನು ಪಡೆಯಬಹುದಾಗಿದೆ. ಇದು ಬಳಕೆದಾರರಿಗೆ ಬೆವರು ಮುಕ್ತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸಲಿದೆ.

ಯುಎಇ ವಾತಾವರಣದಲ್ಲಿ ಬೇಸಿಗೆಯಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ ಈ ಹೆಲ್ಮೆಟ್ ನೆರವಿಗೆ ಬರಲಿದೆ ಎಂದು NIA ಲಿಮಿಟೆಡ್’ನ ಮುಖ್ಯಾಧಿಕಾರಿ ಕಮ್ರಾನ್‌ ಖಾನ್ ಹೇಳಿದ್ದಾರೆ. 24 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿಸುವಿಕೆಯನ್ನು ಒದಗಿಸಲು ಪೇಟೆಂಟ್ ಪಡೆದ ಘನ-ಸ್ಥಿತಿಯ ಕೂಲಿಂಗ್ ತಂತ್ರಜ್ಞಾನದಲ್ಲಿ ಜಾರ್ಶ್‌–ಎನ್‌ಐಎ ಹೆಲ್ಮೆಟ್ ಕಾರ್ಯನಿರ್ವಹಿಸುತ್ತದೆ ಎಂದು ಜಾರ್ಶ್ ಸೇಫ್ಟಿಯ ಸಿಇಒ ಕೌಸ್ತಬ್ ಕೌಂಡಿನ್ಯ ತಿಳಿಸಿದ್ದಾರೆ.



Join Whatsapp