ಭಾರತೀಯ ಪಾಕಗಳಾದ ರಸ್ಮಲೈ ಮತ್ತು ಕಾಜು ಬರ್ಫಿಗೆ ವಿಶ್ವದ ಅತ್ಯುತ್ತಮ ಸಿಹಿತಿಂಡಿ ಪಟ್ಟ!

Prasthutha|

ನವದೆಹಲಿ : ಭಾರತೀಯ ಸಿಹಿತಿಂಡಿಗಳಾಧ ಕಾಜು ಬರ್ಫಿ ಮತ್ತು ರಸ್ಮಲೈ ವಿಶ್ವದ ಅತ್ಯುತ್ತಮ ಸಿಹಿತಿಂಡಿಗಳು ಎಂದು ಹೆಸರು ಗಳಿಸಿದ್ದು, ವಿಶ್ವದ 50 ಅತ್ಯುತ್ತಮ ಡೆಸರ್ಟ್‌ಗಳಲ್ಲಿ ಸ್ಥಾನ ಪಡೆದಿವೆ. ಈ ಎರಡೂ ಸಿಹಿತಿಂಡಿಗಳು ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಗಳಾಗಿವೆ.

- Advertisement -

ಈ ಪಟ್ಟಿಯನ್ನು ವಿಶ್ವಪ್ರಸಿದ್ಧ ಆನ್ಲೈನ್ ಫುಡ್ ವೇದಿಕೆ ಟೇಸ್ಟ್ ಅಟ್ಲಾಸ್ ಸಂಗ್ರಹಿಸಿದ್ದು, ಟೇಸ್ಟ್ ಅಟ್ಲಾಸ್ ನ ಟಾಪ್ 50ರ ಲಿಸ್ಟಲ್ಲಿ  ಭಾರತೀಯ ಸಿಹಿಯಾದ ರಸ್ಮಲೈ 31ನೇ ಸ್ಥಾನದಲ್ಲಿದೆ ಹಾಗೂ ಇನ್ನೊಂದು ಭಾರತೀಯ ಸಿಹಿ ತಿಂಡಿಯಾದ  ಕಾಜು ಬರ್ಫಿ 41ನೇ ಸ್ಥಾನವನ್ನು ಪಡೆದುಕೊಂಡಿದೆ.

ರಸ್ಮಲೈ: ಈ ಸಿಹಿಯನ್ನು ಬಿಳಿ ಕೆನೆ, ಸಕ್ಕರೆ, ಹಾಲು, ಏಲಕ್ಕಿ, ಪನೀರ್ ಚೀಸ್’ನೊಂದಿಗೆ ತಯಾರಿಸಲಾಗುತ್ತದೆ. ಇದು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಸಿಹಿತಿಂಡಿ. ಇಡೀ ದೇಶದಲ್ಲಿ ಇಂತಹ ಮೃದುವಾದ ಸಿಹಿತಿಂಡಿ ಸಿಗುವುದು ಕಷ್ಟ. ಹಬ್ಬಗಳಲ್ಲಿ ರಸಮಲೈ ಇರುತ್ತದೆ

- Advertisement -

ಕಾಜು ಬರ್ಫಿ: ಇದು  ವಜ್ರದ ಆಕಾರದಲ್ಲಿ ತಯಾರಿಸಲಾಗುತ್ತದೆ. ಗೋಡಂಬಿಯ ಪ್ರಮಾಣವೇ ಈ ಸಿಹಿಯ ವಿಶೇಷ ಗುರುತಾಗಿದೆ. ಗೋಡಂಬಿ, ಸಕ್ಕರೆ, ಬೇಳೆ ಪುಡಿ ಮತ್ತು ತುಪ್ಪದ ಬೆಣ್ಣೆಯನ್ನು ಬಳಸಿ ಮಾಡಲಾಗುತ್ತದೆ. ಇದು ತುಂಬಾ ತೆಳ್ಳಗಿರುತ್ತದೆ ಮತ್ತು ಹಗುರವಾಗಿರುತ್ತದೆ. ಅಲ್ಲದೆ, ಇದರಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಕಡಿಮೆಯಾಗಿದೆ.

Join Whatsapp