ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ: ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಗಳ ಮನವಿ ಮಾನ್ಯ

Prasthutha|

ವಾಷಿಂಗ್ಟನ್: ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ. 11ರಂದು ದಾಳಿ ನಡೆಸಿದ ಅಪರಾಧಿಗಳ ಮನವಿ ಒಪ್ಪಂದಗಳನ್ನು ಸೇನಾ ನ್ಯಾಯಾಧೀಶರು ಮಾನ್ಯ ಮಾಡಿದ್ದು, ಮರಣದಂಡನೆಯ ಶಿಕ್ಷೆಯಿಂದ ಇವರು ಪಾರಾಗುವ ಸಾಧ್ಯತೆಗಳಿವೆ.

- Advertisement -


ಈ ಒಪ್ಪಂದದ ಅಂಶಗಳನ್ನು ಬಹಿರಂಗಗೊಳಿಸದಂತೆ ಆದೇಶಿಸಿದ್ದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ಆದೇಶವನ್ನೂ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿಯಲ್ಲಿ ಸುಮಾರು ಮೂರು ಸಾವಿರ ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

- Advertisement -


ದೀರ್ಘಕಾಲದಿಂದ ನಡೆಯುತ್ತಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ತಪ್ಪೊಪ್ಪಿಗೆ ಮನವಿಯನ್ನು ಪರಿಗಣಿಸಿ ಮರಣದಂಡನೆಯಿಂದ ವಿನಾಯಿತಿ ನೀಡುವ ಕುರಿತು ಸರ್ಕಾರಿ ವಕೀಲರು ಸೇನಾ ಅಟಾರ್ನಿಗಳೊಂದಿಗೆ ಸಂಧಾನ ಮಾತುಕತೆ ನಡೆಸಿದ್ದರು. ಇದನ್ನು ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಮಿಲಿಟರಿ ಆಯೋಗದ ಉನ್ನತ ಅಧಿಕಾರಿಗಳು ಅನುಮೋದಿಸಿದ್ದರು.


ಕಳೆದ ಬೇಸಿಗೆಯಲ್ಲಿ ಈ ಒಪ್ಪಂದ ಬಹಿರಂಗಗೊಂಡಿತ್ತು. ಅಮೆರಿಕದ ನೆಲದಲ್ಲಿ ಈವರೆಗೂ ಸಂಭವಿಸಿರುವ ಘಟನೆಗಳಲ್ಲಿ ಅತ್ಯಂತ ಘೋರವಾದ ಪ್ರಕರಣ ಇದಾಗಿದ್ದರೂ, ಅಪರಾಧಿಗಳಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ಮಾತುಕತೆಗಳು ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ರಕ್ಷಣಾ ಕಾರ್ಯದರ್ಶಿ ಕಚೇರಿಯೇ ನಿರ್ಧರಿಸಬೇಕು ಎಂದು ಆ ಸಮಯದಲ್ಲಿ ಆಸ್ಟಿನ್ ಹೇಳಿದ್ದರು.



Join Whatsapp