►ಇಂದು ಸಂಜೆ ಮುಂಬೈನಲ್ಲಿ ಭರ್ಜರಿ ರೋಡ್ ಶೋ
ನವದೆಹಲಿ: ಟಿ20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಟೀಂ ಇಂಡಿಯಾ ಆಟಗಾರರು ಇಂದು ಬೆಳಗ್ಗೆ ತಾಯ್ನಾಡಿಗೆ ಆಗಮಿಸಿದ್ದಾರೆ.
ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನಿಂದ ಹೊರಟಿದ್ದ ವಿಶೇಷ ವಿಮಾನ ದೆಹಲಿಯಲ್ಲಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಜೂ. 1ರಂದು ಬಾರ್ಬಡೋಸ್ ಗೆ ಭೀಕರ ಬೆರಿಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ. ಈಗ ವಿಶೇಷ ವಿಮಾನದ ಮೂಲಕ T20 ವಿಶ್ವಕಪ್ ಟ್ರೋಫಿಯೊಂದಿಗೆ ಆಟಗಾರರೆಲ್ಲ ಆಗಮಿಸಿದರು.