ಕೀನ್ಯಾ: ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಕೀನ್ಯಾದ ಖ್ಯಾತ ಓಟಗಾರ್ತಿ ಆಗ್ನೆಸ್ ಟಿರೊಪ್ ಹತ್ಯೆಗೀಡಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಆಗ್ನೆಸ್ ಟಿರೊಪ್ ಅವರ ಪತಿ ಇಬ್ರಾಹೀಂ ರೋಟಿಚ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲೇ ಚಾಕುವಿನಿಂದ ತಿವಿದು ಆಗ್ನೆಸ್ ಟಿರೊಪ್ ಅವರನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು.
ಅವರನ್ನು ಪತಿಯೇ ಕೊಂದಿರಬಹುದೆಂದು ಶಂಕಿಸಲಾಗಿತ್ತು ಇದಿಗ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಟಿರೊಪ್ 5000 ಮೀ. ಓಟದಲ್ಲಿ ಆಗ್ನೆಸ್ ಟಿರೊಪ್ ಪಾಲ್ಗೊಂಡಿದ್ದರು. ನಾಲ್ಕನೆಯವರಾಗಿ ಗುರಿ ತಲುಪಿದ್ದರು. ಕಳೆದ ತಿಂಗಳಷ್ಟೇ ಜರ್ಮನಿಯಲ್ಲಿ 10 ಕಿ.ಮೀ. ಮ್ಯಾರಥಾನ್ ನಲ್ಲಿ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದರು. 30 ನಿಮಿಷ,1 ಸೆಕೆಂಡ್ನಲ್ಲಿ ಗುರಿ ಮುಟ್ಟಿದ್ದರು. ಈ ವೇಳೆ ಹಿಂದಿನ ದಾಖಲೆಗಿಂತ 28 ಸೆಕೆಂಡ್ ಮುಂಚಿತವಾಗಿ ಗುರಿ ಸಾಧಿಸಿದ್ದರು. ಹಾಗೆಯೇ 2017, 2019ರ ವಿಶ್ವ ಚಾಂಪಿಯನ್ಶಿಪ್ನ 10,000 ಮೀ. ಓಟದಲ್ಲಿ ಕಂಚು ಗೆದ್ದಿದ್ದರು.
25 ವರ್ಷದ ಆಗ್ನೆಸ್ ಟಿರೊಪ್ ಕೀನ್ಯಾದ ಖ್ಯಾತ ಅಥ್ಲಿಟ್ ಆಗಿದ್ದಾರೆ. ಅವರ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಪೊಲೀಸರು ಕೀನ್ಯಾದ ಎಲ್ಗೆಯೊ ಮರಕ್ವೆಟ್ ರಾಜ್ಯದ ಇಟೆನ್ ನಗರದಲ್ಲಿರುವ ಆಗ್ನೆಸ್ ಮನೆಗೆ ತಲುಪಿದ್ದಾಗ, ಆಕೆ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.