ವಾಷಿಂಗ್ಟನ್: ಹಣದುಬ್ಬರ ತಗ್ಗಿಸಲು ಕೇಂದ್ರೀಯ ಬ್ಯಾಂಕುಗಳು ಬಡ್ಡಿ ದರ ಏರಿಸುತ್ತಿವೆ. ಅದರ ಪರಿಣಾಮಕಾರಿಯಲ್ಲ. 2023ರ ಆರ್ಥಿಕ ಹಿಂಜರಿತ ವಿನಾಶಕಾರಿ ಆಗಿರುತ್ತದೆ ಎನ್ನುವುದು ನನ್ನ ಭೀತಿಯಾಗಿದೆ ಎಂದು ವಿಶ್ವ ಬ್ಯಾಂಕಿನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಕಳವಳ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಆರ್ಥಿಕ ವೃದ್ಧಿ ದರ 0.5ಕ್ಕೆ ಕುಸಿಯಲಿದೆ. ಸರಕಾರಗಳು ಪೂರೈಕೆಯನ್ನು ಸುಗಮಗೊಳಿಸಬೇಕು. ಕೋವಿಡ್ ವೇಳೆ ಬಾಧಿಸಿದ್ದ ಪೂರೈಕೆಯು ಈಗ ಬೇಡಿಕೆ ಏರಿದ ಬಳಿಕವೂ ಸರಿಯಾಗಿ ಆಗುತ್ತಿಲ್ಲ. ಉಕ್ರೇನ್ ಯುದ್ಧ, ಚೀನಾದ ದೀರ್ಘ ಲಾಕ್ಡೌನ್ ಕೂಡ ಆರ್ಥಿಕ ಹಿಂಜರಿತಕ್ಕೆ ಮತ್ತು ವಸ್ತುಗಳ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿವೆ.
2023ರ ಆರ್ಥಿಕ ಹಿಂಜರಿತ ತಪ್ಪಿಸಲಾಗದ್ದು, ಆದರೆ ಸರಕಾರಗಳು ಎಚ್ಚರಿಕೆ ವಹಿಸಿದರೆ ಅದರ ತೀವ್ರತೆಯನ್ನು ತಗ್ಗಿಸಬಹುದು. ವಿಶ್ವ ಬ್ಯಾಂಕಿನ ವರದಿಯು ಆರ್ಥಿಕ ಹೊಡೆತದ ಹತ್ತಾರು ಮಗ್ಗುಲುಗಳ ವಿವರದೊಂದಿಗೆ ಹೊರಬಂದಿದೆ.