ವಿಶ್ವ ಬ್ಯಾಡ್ಮಿಂಟನ್ | ಕ್ವಾರ್ಟರ್‌ಫೈನಲ್‌ಗೆ ಪ್ರಣಯ್‌‌, ಸೈನಾ ನೆಹ್ವಾಲ್‌ ನಿರ್ಗಮನ

Prasthutha|

ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಎಚ್‌ಎಸ್‌. ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನ

- Advertisement -

ಮೂರನೇ  ಸುತ್ತಿನ ʻಭಾರತೀಯರ ನಡುವಿನ ಕದನʼದಲ್ಲಿ ಪ್ರಣಯ್‌, ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್‌ ವಿರುದ್ಧ 17-21, 21-16, 21-17 ಅಂತರದಲ್ಲಿ ಗೆದ್ದು ಎಂಟರ ಘಟ್ಟ ತಲುಪಿದ್ದಾರೆ.  ಒಂದು ಗಂಟೆ, 15 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರರ ನಡುವೆ ತುರುಸಿನ ಪೈಪೋಟಿ ಕಂಡುಬಂತು.  ಎಂಟರ ಘಟ್ಟದಲ್ಲಿ ಪ್ರಣಯ್ , ಚೀನಾದ ಝಾವೊ ಜುನ್ ಪೆಂಗ್ ಸವಾಲನ್ನು ಎದುರಿಸಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಭರವಸೆ ಮೂಡಿಸಿದ್ದ ಸೈನಾ ನೆಹ್ವಾಲ್‌, ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 17-21, 21-16 13-21 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.  ಮೊಣಕಾಲಿನ ಗಾಯದಿಂದಾಗಿ ಸ್ಟಾರ್‌ ಶಟ್ಲರ್‌  ಪಿವಿ ಸಿಂಧು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಮಹಿಳಾ ವಿಭಾಗದಲ್ಲಿ ಒಲಿಂಪಿಯನ್‌ ಸೈನಾ ಭಾರತದ ಏಕೈಕ ಭರವಸೆಯಾಗಿ ಉಳಿದಿದ್ದರು.

- Advertisement -

ಪುರುಷರ ಡಬಲ್ಸ್‌ನಲ್ಲಿ ಗೆಲುವು

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್‌ನ ಜೆಪ್ಪೆ-ಲಾಸ್ಸೆ ಜೋಡಿ ವಿರುದ್ಧ 21-21-10 ಅಂತರದಲ್ಲಿ ಸುಲಭ ಜಯಗಳಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಈ ಪಂದ್ಯವು ಕೇವಲ 35 ನಿಮಿಷಗಳಲ್ಲೇ ಮುಕ್ತಾಯ ಕಂಡಿತು. ಪುರುಷರ ಡಬಲ್ಸ್‌ನ ಇನ್ನೊಂದು ಪಂದ್ಯದಲ್ಲಿ ಧ್ರುವ- ಅರ್ಜುನ್ ಜೋಡಿಯು 18–21, 21–15, 21–16ರಿಂದ ಸಿಂಗಪುರದ ಟೆರಿ ಹೀ ಹಾಗೂ ಕೀನ್ ಹೀನ್ ಜೋಡಿಯ ವಿರುದ್ಧ ಜಯಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

Join Whatsapp