ಸುರತ್ಕಲ್: ಸುಮಾರು 25 ವರ್ಷಗಳಿಂದ ಎಚ್ ಪಿ ಸಿ ಎಲ್ ಅಡುಗೆ ಅನಿಲ ಜಾಡಿ ತುಂಬಿಸುವ ಘಟಕದಲ್ಲಿ ಈ ಸ್ಥಳೀಯ ಕಾರ್ಮಿಕರು ದುಡಿಯುತ್ತ ಬಂದಿರುತ್ತಾರೆ. ಅದರಲ್ಲೂ ಕೆಲವರು ಗಾರ್ಡನ್ ಕೆಲಸ ಮಾಡಿಕೊಂಡಿದ್ದು, ಈಗ ದಿಲ್ಲಿ ಕಂಪನಿಗೆ ಅದರ ಗುತ್ತಿಗೆ ದೊರಕಿದ್ದು, ಅವರು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಬೇರೆ ಕಾರ್ಮಿಕರನ್ನು ತಂದು ಇಲ್ಲಿ ನಿಯೋಜಿಸಿದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಕಾರ್ಮಿಕರು ದಿಢೀರ್ ಮುಷ್ಕರ ನಡೆಸಿದ್ದಾರೆ.
ಮೇಲಾಧಿಕಾರಿಗಳು ಕಾರ್ಮಿಕರ ಯಾವುದೇ ಬೇಡಿಕೆಗೆ ಪ್ರತಿಸ್ಪಂದಿಸದೇ ಇರುವುದರಿಂದ ಸಂತ್ರಸ್ತ ಕಾರ್ಮಿಕರಿಗೆ ಬೆಂಬಲವಾಗಿ ಇತರ ಸೇವೆಯನ್ನು ನಿರ್ವಹಿಸುವ ಎಲ್ಲಾ ಕಾರ್ಮಿಕರು ಸೇರಿ ಹಠಾತ್ ಮುಷ್ಕರವನ್ನು ಮಾಡಿದರು.
ಇದರಿಂದ ಬೇರೆ ಬೇರೆ ಕಡೆ ಅಡುಗೆ ಅನಿಲ ಜಾಡಿಗಳನ್ನು ಸರಬರಾಜು ಮಾಡುವ ಕಾರ್ಯವು ಸಗಿತಗೊಂಡಿದ್ದು, ಲಾರಿಗಳು ಸಾಲಾಗಿ ನಿಂತಿದ್ದು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಹಾಗೂ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆಯದೆ ಕೆಲಸದಲ್ಲಿ ಮುಂದುವರಿಸಲು ಕಂಪೆನಿ ಅವಕಾಶ ಮಾಡಿಕೊಡಬೇಕೆಂದು ಕಾರ್ಮಿಕರ ಆಗ್ರಹಿಸಿದ್ದಾರೆ.