ಹಾಕಿ ಆಟದ ಬದಲಾದ ನಿಯಮಗಳ ಬಗ್ಗೆ ಕಾರ್ಯಗಾರ

Prasthutha|

ಮಡಿಕೇರಿ: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬದಲಾದ ಹಾಕಿ ನಿಯಮದ ಬಗ್ಗೆ ಕಾರ್ಯಗಾರ ಶುಕ್ರವಾರ ಏರ್ಪಡಿಸಲಾಗಿತ್ತು.

- Advertisement -


ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಚಂದ್ರನಾಯಕ್, ವಿಶೇಷ ಅತಿಥಿಯಾಗಿ ಆಗಮಿಸಿದ್ದ ಹಾಕಿ ತರಬೇತಿದಾರರಾದ ಬಿಂಧ್ಯಾ ಡಿವೈಎಸ್ಎಸ್ ಅವರು ಹಾಕಿ ಆಟದ ಬದಲಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.


ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಶ್ರೀನಿವಾಸ್ ಅವರು ಮಾತನಾಡಿ ದೈಹಿಕ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಕ್ರೀಡಾ ನಿಯಮಗಳಲ್ಲಿ ಆಗುವ ಬದಲಾವಣೆ ಅರಿತುಕೊಂಡು ಕೆಲಸ ಮಾಡೋಣ ಎಂದರು.

- Advertisement -


ಮಡಿಕೇರಿ ತಾಲೂಕು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ನಂತರ ದಿವಂಗತರಾದ ಪಿ.ಕೆ.ಮುತ್ತಪ್ಪ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ, ಪುಷ್ಪ ನಮನ ಸಲ್ಲಿಸಲಾಯಿತು.



Join Whatsapp