ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ: ನೌಕರರಿಗೆ ತಾಕೀತು ಮಾಡಿದ ಎಲಾನ್ ಮಸ್ಕ್

Prasthutha|

ನವದೆಹಲಿ: ಟ್ವಿಟರ್ ನ ಮಾಲಕತ್ವ ಪಡೆದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದ ಎಲಾನ್ ಮಸ್ಕ್ ಇದೀಗ “ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ” ಎಂದು ನೌಕರರಿಗೆ ಆಜ್ಞೆ ಹೊರಡಿಸಿದ್ದಾರೆ.

- Advertisement -

ಈ ಕುರಿತು ನೌಕರರಿಗೆ ಇಮೇಲ್ ಮಾಡಿರುವ ಅವರು, ಹೆಚ್ಚು ಅವಧಿ ಕೆಲಸ ಮಾಡಿ ಇಲ್ಲವೇ ಮನೆಗೆ ನಡೀರಿ ಎಂದು ಹೇಳಿದ್ದಾರೆ.

ವರ್ಕ್ ಫ್ರಮ್ ಹೋಮ್ (ಡಬ್ಲ್ಯುಎಫ್ಎಚ್) ಇನ್ನು ಮುಂದೆ ಅನುಮತಿಸಲಾಗುವುದಿಲ್ಲ ಮತ್ತು ಉದ್ಯೋಗಿಗಳು ಕಚೇರಿಯಲ್ಲಿ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಈ ಮೊದಲೇ ಮಸ್ಕ್ ತಿಳಿಸಿದ್ದರು.

- Advertisement -

ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ಟ್ವಿಟರ್ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು ಎಂದು ಅವರು ಹೇಳಿದ್ದಾರೆ.

ಇಮೇಲ್’ಗೆ ಕಳುಹಿಸಿರುವ ಲಿಂಕ್ ಮೂಲಕ ಸಂಜೆ 5 ಗಂಟೆಯ (ವಾಷಿಂಗ್ಟನ್ ಸಮಯ) ಒಳಗಾಗಿ ಉತ್ತರಿಸಿ ಎಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದಲ್ಲದೇ ಟ್ವಿಟರ್’ಗೆ ಶೀಘ್ರವೇ ನೂತನ ಸಾರಥಿಯನ್ನು ನೇಮಕ ಮಾಡುವುದಾಗಿ ಇಲಾನ್ ಮಸ್ಕ್ ತಿಳಿದ್ದಾರೆ. ಟೆಸ್ಲಾದಲ್ಲಿ ಮಸ್ಕ್ ವಾರ್ಷಿಕ $56 ಪೇ ಪ್ಯಾಕೇಜ್ ಪಡೆಯುತ್ತಿದ್ದು, ಅವರಿಗೆ ನೀಡಿರುವ ವಾರ್ಷಿಕ ಗುರಿ ಸುಲಭದಲ್ಲಿ ಸಾಧಿಸುವಂತಿದೆ ಎಂದು ಟೆಸ್ಲಾದ ನಿರ್ದೇಶಕರು ಕೋರ್ಟ್ ಮೆಟ್ಟಲೇರಿದ್ದರು. ಅಲ್ಲದೇ ಟ್ವಿಟರ್ ಕಡೆ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ಬಗ್ಗೆ ಕೋರ್ಟ್’ಗೆ ಉತ್ತರಸುವ ವೇಳೆ, ಮಸ್ಕ್ ಟ್ವಿಟರ್’ಗೆ ಹೊಸ ನಾಯಕನನ್ನು ನೇಮಕ ಮಾಡುವುದಾಗಿ ಘೋಷಿಸಿದ್ದು, ಇನ್ನೊಂದು ವಾರದಲ್ಲಿ ಟ್ವಿಟರ್’ನ ಸಾಂಸ್ಥಿಕ ಪುನರಚನೆ ಪ್ರಕ್ರಿಯೆಗಳನ್ನು ಮುಗಿಸಲಿದ್ದೇನೆ ಎಂದು ಹೇಳಿದ್ದಾರೆ.



Join Whatsapp