ರಾಜಕೀಯಕ್ಕೆ ಬರಲ್ಲ, ಜನಪರ ಕೆಲಸ ನಿಲ್ಲಲ್ಲ: ನಟ ವಿಶಾಲ್

Prasthutha|

ಚೆನ್ನೈ: ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ನಟ ವಿಶಾಲ್ ಹೇಳಿದ್ದಾರೆ.

- Advertisement -


ನಟ ವಿಶಾಲ್ ರಾಜಕಾರಣವನ್ನು ಗುರಿಯಾಗಿಟ್ಟುಕೊಂಡು ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರ ತಾಯಿ ಹೆಸರಿನಲ್ಲಿ ಫೌಂಡೇಶನ್, ಅಭಿಮಾನಿಗಳ ಕ್ಲಬ್ ಹೆಸರಿನಲ್ಲಿ ಸಮಾಜ ಸೇವೆ ಹೀಗೆ ವಿಶಾಲ್ ಮಾಡುತ್ತಿರುವುದಕ್ಕೆ ರಾಜಕಾರಣವನ್ನು ತಳುಕು ಹಾಕಲಾಗಿತ್ತು.

ಈ ಎಲ್ಲ ಕುರಿತಂತೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಖುಷಿಯಾಗಿ ಇವೆಲ್ಲವನ್ನೂ ಮಾಡುತ್ತಿರುವೆ. ಅದಕ್ಕೂ ರಾಜಕಾರಣಕ್ಕೂ ತಳುಕು ಹಾಕಬೇಡಿ ಎಂದು ಅವರು ಪತ್ರ ಬರೆದಿದ್ದಾರೆ.

- Advertisement -


ಸದ್ಯಕ್ಕೆ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ಏನು ಅಂತ ಗೊತ್ತಿಲ್ಲ. ಸಮಾಜ ಸೇವೆ ಎಂದಿನಂತೆ ಮುಂದುವರೆಯಲಿದೆ. ತಾಯಿ ಹೆಸರಿನಲ್ಲಿ ಮತ್ತು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ.




Join Whatsapp